ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಧರಣಿ ಸ್ಥಳದಲ್ಲಿ ಅರೆಬೆತ್ತಲೆಯ ಮೂಲಕ ಪ್ರತಿಭಟನೆ

ಬೀದರ:ಸೆ.14:75 ನೇ ದಿನಕ್ಕೆ ಕಾಲಿಟ್ಟ ಕಾರಂಜಾ ಮುಳುಗಡೆ ಸಂತ್ರಸ್ತರ ಅಹೋರಾತ್ರಿ ಧರಣಿಯಲ್ಲಿ ಇಂದು ಅರೆಬೆತ್ತಲೆಯನ್ನು ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಯಿತು. ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರು, /ಪಶುಸಂಗೋಪನಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ವರೆಗೆ ಸಮಸ್ಯೆ ಯನ್ನು ಆಲಿಸುವ ಸೌಜನ್ಯವನ್ನೂ ತೋರದೆ ಇರುವುದನ್ನು ಖಂಡಿಸಲಾಯಿತು.

ಅನೇಕ ಸಂತ್ರಸ್ತ ರೈತ ನಾಯಕರು ಮಾತನಾಡಿದರು.

ಹಿತರಕ್ಷಣಾ ಸಮಿತಿಯ ಅಧ್ಯಕ್ಷ ರಾದ ಚಂದ್ರಶೇಖರ ಪಾಟೀಲರವರು ಹೊಚಕನಳ್ಳಿಯವರು ಮಾತನಾಡಿ, ಕಳೆದ 74 ದಿವಸಗಳಿಂದ ಸಂತ್ರಸ್ತ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾರೊಬ್ಬ ಆಡಳಿತಾರೂಢ ಪಕ್ಷದ ಜವಾಬ್ದಾರಿ ಜನಪ್ರತಿನಿಧಿಗಳು ಈ ಕಡೆಗೆ ಕಣ್ಣೆತ್ತಿ ಕೂಡ ನೋಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಶಾಂತತೆ ಯನ್ನು ಕಾಪಾಡಿಕೊಂಡು ಬಂದಿರುವ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು  ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. ಭಾಗವಹಿಸಿದವರೆಲ್ಲರೂ ಅರೆಬೆತ್ತಲೆಯಾಗಿದ್ದರು.   ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿಯವರು  90% ರಷ್ಟು ಬೆತ್ತಲಾಗಿದ್ದರು.
  ಸಮಿತಿಯ ನಿರ್ದೇಶಕ ವೀರಭದ್ರಪ್ಪ ಉಪ್ಪಿನ್ ರವರು ಮಾತನಾಡಿ,  ಸದನದಲ್ಲಿ ನಡೆಯುತ್ತಿರುವ  ಅಧಿವೇಶನದಲ್ಲಿ ಕಾರಂಜಾ ಸಮಸ್ಯೆಯನ್ನು ಚರ್ಚಿಸಿ, ಪರಿಹಾರ ಕಂಡು ಹಿಡಿಯದಿದ್ದರೆ, ಮುಂಬರುವ ದಿನಗಳಲ್ಲಿ  ಕೇಶಮುಂಡನೆ, ರಾಸ್ತಾರೋಕೊ, ಬಸ್/ಟ್ರೇನ್ ರೋಕೊ, ಡ್ಯಾಮ್ ನ ಆವರಣದಲ್ಲಿ ಧರಣಿ, ಬೀದರ್ ಬಂದ್ ನಂತಹ ಚಳುವಳಿಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಅಣ್ಣಾರಾವ, ಕಲ್ಯಾಣ ರಾವ್ ಚನಶೆಟ್ಟಿ, ಸಿರಸಿ ಔರಾದ್ ನ  ಭೀಮರೆಡ್ಡಿ, ಸೂರ್ಯಕಾಂತ, ವಿಜಯಕುಮಾರ್ ಡಾಕುಳಗಿ, ರಾಜಶೇಖರ, ರಾಜಪ್ಪ, ಸುಭಾಷ್ ಔರಾದ,  ದಯಾನಂದ ಸ್ವಾಮಿ, ಮಾದಪ್ಪ, ಸಾದಕ ಅಲಿ, ರಾಮಕೃಷ್ಣ, ಸಂಗಪ್ಪ, ಅಣ್ಣೆಪ್ಪ, ಕರಬಸಪ್ಪ, ಜಗನ್ನಾಥ್, ವೈಜಿನಾಥ, ರಿಯಾಜೋದ್ದಿನ, ಸುಧಾಕರ, ರಾಜಪ್ಪ ಕಮಲಪೂರ, ಮಾಣಿಕ, ಜಹುಮಿಯ್ಯಾ, ತುಕಾರಾಮ ಶಾಮಣ್ಣ ಬಾವಗಿ, ಮುಂತಾದವರು ಭಾಗವಹಿಸಿದ್ದರು.