ಸರ್ಕಾರದ ಗ್ರಾಮ ಅಭಿವೃದ್ಧಿ ಕಾರ್ಯಕ್ರಮಗಳ ಅರಿವು

ಕೋಲಾರ ಜ,೧೭- ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕೋಲಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಲಾರ ಇವರುಗಳ ಸಹಯೋಗದಲ್ಲಿ ಕೆ.ಜಿ.ಎಫ್ ತಾಲ್ಲುಕಿನ ಆಯ್ದ ಹತ್ತು ಪಂಚಾಯ್ತಿಗಳಲ್ಲಿ ಪ್ರತಿ ಗ್ರಾಮ ಪಂಚಾಯಿ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಪ್ರಸಕ್ತ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಾನಪದ ಗಾಯನದ ಮೂಲಕ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲಾಯಿತು.
ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ, ಕ್ಯಾಸಂಬಳ್ಳಿ, ಪಾರಂಡಹಳ್ಳಿ, ಮಾರಿಕುಪ್ಪ, ಘಟ್ಟಮಾದಮಂಗಲ, ಸುಂದರಪಾಳ್ಯ, ಎನ್.ಜಿ.ಹುಲ್ಕೂರು, ವೆಂಗಸಂದ್ರ, ಹುಲ್ಕೂರು, ಕಂಗಾಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈನೆಲ ಈಜಲ ಕಲಾ ತಂಡದ ಚೌಡದೇನಹಳ್ಳಿ ವೆಂಕಟಾಚಲಪತಿ, ಕೋಲಾರದ ಹೆಚ್.ಶಾಂತಮ್ಮ, ಎನ್.ಗಣೇಶಪ್ಪ ರವರು ಜನಪದ ಗಾಯನದ ಮೂಲಕ ಅರಿವು ಮೂಡಿಸಿದರು. ತಮಟೆ ಸಹಕಾರವನ್ನು ರಾಜ್‌ಕುಮಾರ್.ವಿ ನೀಡಿದರು.