ಸರ್ಕಾರದ ಕೋವಿಡ್ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ

ಹನೂರು:ಏ:21: ಪಟ್ಟಣದಲ್ಲಿನ ಹೊಟೇಲ್, ಗಿರಾಣಿ, ಮೆಡಿಕಲ್ ಸ್ಟೋರ್, ಬಟ್ಟೆಅಂಗಡಿ, ಆಟೋ ಮೊಬೈಲ್ಸ್, ಜ್ಯುವೆಲರ್ಸ್ ಅಂಗಡಿಗಳಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಸೂಕ್ತ ಕ್ರಮಕೈಗೊಂಡು ವಹಿವಾಟು ನಡೆಸುವಂತೆ ವರ್ತಕರಿಗೆ ಇನ್ಸ್‍ಪೆಕ್ಟರ್ ಸಂತೋμïಕಶ್ಯಪ್ ಸೂಚನೆ ನೀಡಿದರು
ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಹೊಟೇಲ್ ಮಾಲೀಕರು, ವರ್ತಕರು, ಬಾರ್ ವೈನ್ಸ್ ಅಂಗಡಿ ಮಾಲೀಕರುಗಳ ಸಭೆಯಲ್ಲಿಅವರು ಮಾತನಾಡಿದರು.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ, ವರ್ತಕರು ಸರ್ಕಾರದ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಅಂಗಡಿಗಳಲ್ಲಿ ಸ್ಯಾನಿಟೇಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ಡುಕೊಂಡು ವಹಿವಾಟು ನಡೆಸಬೇಕು, ಅಂಗಡಿಗಳಿಗೆ ಬರುವಂತಹ ಗ್ರಾಹಕರಿಗೆ ತಾವುಗಳು ಅರಿವು ಮೂಡಿಸಬೇಕು, ಇಲ್ಲವಾದಲ್ಲಿ ಕರ್ನಾಟಕ ಅಪಿಡೇಮಿಕ್ ಡಿಸೀಸನ್ ಆಕ್ಟ್ 2020 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಬ್‍ಇನ್ಸ್ಪೆಕ್ಟರ್ ನಾಗೇಶ್, ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್‍ಗುಪ್ತ ಹಾಗೂ ವರ್ತಕರುಗಳು ಇದ್ದರು.