ಸರ್ಕಾರದ ಆದೇಶ ಧೂಳಿಪಟ: ಮಕ್ಕಳ ಜೀವದ ಜೊತೆ ಆಟ

ಔರಾದ :ಎ.23: ಇಡಿ ಜಗತ್ತು ಕೋವಿಡ್ಸ ಮಹಾಮಾರಿಯಿಂದ ತತ್ತರಿಸಿದೆ. ದಿನೆ ದಿನೆ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ ಅದರ ಜೊತೆಗೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಜನ ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ ಸರ್ಕಾರವು ಸಹ ಲಾಕ್ ಡೌನ ಘೋಷಣೆ ಮಾಡಿದೆ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಿ ಆದೇಶಿಸಿದೆ.

ಔರಾದ ಪಟ್ಟಣದ ನವಚೇತನ ಪ್ರಾಥಮಿಕ ಮತ್ತು ಪ್ರೌಢ ಖಾಸಗಿ ಶಾಲಾ ಸಂಸ್ಥೆ ಸರ್ಕಾರದ ಆದೇಶ ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಸಮಾಜಿಕ ಅಂತರವಿಲ್ಲದೆ ತರಗತಿ ನಡೆಸುತ್ತಿದೆ. ನಾಳೆ ಏನಾದರು ಆದರೆ ಯಾರು ಹೊಣೆ ಜೀವ ಮೊದಲು ಎನ್ನುವುದು ತಿಳಿಯಬೇಕು. ಅದನ್ನು ಬಿಟ್ಟು ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿರುವ ಪ್ರಶ್ನೆ ಮಾಡಿದರೆ ಮಕ್ಕಳ ಪಠ್ಯಕ್ರಮ ಹಿಂದೆ ಬಿದ್ದಿರುವ ಕಾರಣ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳುವರು. ಒಂದು ವರ್ಷದಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಂಡಿದೆ ನಿಜ ಆದರೆ ಇಂತಹ ದುರ್ಲಭ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರವಿಲ್ಲದೆ ತರಗತಿಗಳನ್ನು ನಡೆಸುತ್ತಿರುವುದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

ಖಾಸಗಿ ಶಾಲೆಯವರು ಶಿಕ್ಷಕರಿಗೆ ಸಂಬಳ ನೀಡಿರುವ ಕಾರಣ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದ ಶಿಕ್ಷಕರು… ಖಾಸಗಿ ಶಾಲೆಯವರು ಮಕ್ಕಳಲ್ಲಿ ಪುರ್ತಿ ಪ್ರಮಾಣದ ಶುಲ್ಕ ಭರಿಸಿಕೋಂಡು ಮುಂದಿನ ಫಲಿತಾಂಶ ಹಾಗೂ ಶಾಲೆಯ ಶೇಕಡಾವಾರು ಪ್ರತಿಷತ ನೊಡುತ್ತಿದಾರೆ ವಿನಹ ಸರಕಾರದ ಆದೇಶ ಪಾಲಿಸುತ್ತಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮಕ್ಕಳ ಆರೋಗ್ಯ ಕಾಪಾಡಬೇಕು