ಸರ್ಕಾರದ ಆದೇಶ ಕೈಬಿಡಲು ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ, ಆ 4: ಜನನ ಮರಣಗಳ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನ್ಯಾಯಾಂಗದ ವ್ಯಾಪ್ತಿಯನ್ನು ಜೆಎಂಎಫ್‍ಸಿ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜೆಎಂಎಫ್‍ಸಿ ನ್ಯಾಯಾಲಯದ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಸರ್ಕಾರದ ಈ ಆದೇಶ ಕಕ್ಷಿದಾರರನ್ನು ಸಂಕಷ್ಟಕ್ಕೆ ಕೆಡುವಿದ್ದು ಈ ಮೊದಲಿನಂತೆ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ನೀಡುವಂತೆ ಮರು ಆದೇಶ ಮಾಡಬೇಕು ಎಂದು ವಕೀಲರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಗದೀಶ ದೊಡ್ಡಮನಿ, ನ್ಯಾಯವಾದಿ ಬಸವರಾಜ ಬಾಳೇಶ್ವರ್‍ಮಠ, ವಿಠಲ್ ನಾಯಕ್, ಮಾತನಾಡಿದರು.
ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿ ವಿ.ಎಲ್. ಪೂಜಾರ, ಎನ್,ಎನ್. ಎನ್.ಎನ್. ಬಾಡಗಿ, ಎ.ಬಿ. ಪಾಟೀಲ್, ಬಿ.ಎಸ್. ಗೊಂಗಡಿ, ಬಿ.ಬಿ. ಭುವನಗೌಡರ, ಎನ್.ಐ. ಬೆಲ್ಲದ, ಮಹೇಶ್ ಹಾರೋಗೇರಿ, ಅನಂತ ಕಟ್ಟಿಮನಿ, ಬಿ.ಎಸ್. ಪಶುಪತಿಹಾಳ, ಎನ್.ಸಿ. ಅಮಾಸಿ, ಎನ್.ಎಸ್. ಕೋರಣ್ಣನವರ, ನೇತ್ರಾ ರಿತ್ತಿಮಠ, ಉಮಾ ಬಳ್ಳಾರಿ, ಎ.ಬಿ. ಪಾಟೀಲ್, ಅನಂತ ಕಟ್ಟಿಮನಿ, ಪಿ.ಎಂ. ನಾವಿ, ಪಿ.ಎಂ. ವಾಲಿ, ಎಚ್. ಪಾಟೀಲ್ ಸೇರಿದಂತೆ ಅನೇಕರಿದ್ದರು.