ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು; ಸತೀಶ್ ಕುಮಾರ್

ಹರಿಹರ ಏ 23 ; ವಿಪತ್ತು ನಿರ್ವಹಣಾ ಅಧಿನಿಯಮ ಅಡಿಯಲ್ಲಿ ಮಹಾಮಾರಿ ಕೊರೋನಾವೈರಸ್ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡೆಡ್ಲಿ ವೈರಸ್   ನಿಯಂತ್ರಣಕ್ಕಾಗಿ ನಾಳೆಯಿಂದ  2ದಿನಗಳ ಕಾಲ ಕರ್ಫ್ಯೂ  ಜಾರಿಯಲ್ಲಿರುತ್ತದೆಯೆಂದು ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು ಹೇಳಿದರು 
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ನ್ಯಾಯಬೆಲೆ ಅಂಗಡಿಗಳು (ಪಿಡಿಎಸ್) ಕಿರಾಣಿ ಅಂಗಡಿಗಳು ದಿನಸಿ ಹಣ್ಣು ಮತ್ತು ತರಕಾರಿ ಡೈರಿ ಹಾಲಿನ ಬೂತ್ ಗಳು ಮಾಂಸ ಮತ್ತು ಮೀನು ಪಶು ಆಹಾರದ ಅಂಗಡಿಗಳಿಗೆ ಅನುಮತಿ ಸಲಾಗಿದೆ. ತರಕಾರಿ ಹಣ್ಣು ಹೂವು ಮಾರುಕಟ್ಟೆಗಳಿಗೆ ಬಯಲು ಪ್ರದೇಶ ಆಟದ ಮೈದಾನ ಗಳಲ್ಲಿ ಮಾರಾಟ ಮಾಡಲು ಕೋವಿಂಡ ಸಮುಚ್ಚಿದ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಶರತ್ತುಗಳಿಗೊಳಪಟ್ಟು ಅನುಮತಿಸಿದೆ .ರೆಸ್ಟೋರೆಂಟ್ ಗಳು ಮತ್ತು ಉಪಾಹಾರ ಗೃಹಗಳಿಗೆ ಪಾರ್ಸಲ್ ಸೇವೆಗೆ ಮಾತ್ರ .ವಸತಿ ಸೌಕರ್ಯದ ಹೋಟೆಲ್ ಗಳಿಗೆ ಅತಿಥಿ ಸೇವೆ ಮಾಡಲು ಮಾತ್ರವೇ ಅನುಮತಿ ನೀಡಿದೆ .ಪ್ರತ್ಯೇಕ ಮದ್ಯದ ಅಂಗಡಿಗಳು ಮತ್ತು ಹೋಟೆಲ್ ಗಳು ಬಾರ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಪಾರ್ಸಲ್ ನೀಡುವುದಕ್ಕೆ ಮಾತ್ರ .ಎಲ್ಲಾ ಆಹಾರ ಸಂರಕ್ಷಣೆ ಮತ್ತು ಅದಕ್ಕೆ ಸಂಬಂಧಿತ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿಸಿದೆ .ಕ್ಷೌರದಂಗಡಿಗಳು ಸಲೂನ್ ಬ್ಯೂಟಿಪಾರ್ಲರ್ ಗೆ ಪಾರ್ಲರ್ ಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು .ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ ಎಲ್ಲ ಅಂಗಡಿಗಳು ಅನುಮತಿಸಿದೆ . ಕಂಟೋನ್ಮೆಂಟ್ ವಲಯಗಳ ವರೆಗಿನ ಎಲ್ಲಾ ಕೃಷಿ ಬೇಸಾಯ ಸಂಬಂಧಿತ ಸಂಬಂಧಿತ ಚಟುವಟಿಕೆಗಳಿಗೆ ಪೂರಕವಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸುವ ಅಂಗಡಿಗಳು ಮತ್ತು ದಾಸ್ತಾನು ಮಳಿಗೆಗಳಿಗೆ ಕೃಷಿ ಯಂತ್ರಧಾರೆಗೆ ಗಳಿಗೆ ಅನುಮತಿ ನೀಡಲಾಗಿದೆ .ವಿಪತ್ತು ನಿರ್ವಹಣಾ ಅಧಿನಿಯಮ ಅಡಿಯಲ್ಲಿ ಕೋವಿಡ ಮಾರ್ಗ ಸೂಚಿಗಳ ಅನ್ವಯ ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಆದೇಶಗಳನ್ನು ಪಾಲಿಸದಿದ್ದಲ್ಲಿ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು 2ದಿನಗಳ ಕಾಲ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಪ್ರತಿಯೊಬ್ಬರೂ ಪಾಲಿಸಬೇಕು. ಪ್ರತಿಯೊಬ್ಬರೂ  ಮಾರ್ಗಸೂಚಿಗಳನ್ನು ಪಾಲಿಸಬೇಕೆಂದರು ತುರ್ತು  ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮತ್ತು ಹೋಟೆಲ್ ಗಳಲ್ಲಿ  ಪಾರ್ಸಲ್ ಅವಕಾಶ ನೀಡಿದ್ದು  ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಬಂದ್  ಮಾಡಬೇಕು .ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕೇಸನ್ನು ದಾಖಲು ಮಾಡಬೇಕಾಗುತ್ತದೆ ಅದಕ್ಕೆ ಅವಕಾಶ ನೀಡದೆ ಪ್ರತಿಯೊಬ್ಬರು ಸರ್ಕಾರದ ಮಾರ್ಗ ಸೂಚಿ ಗಳನ್ನು ಚಾಚುತಪ್ಪದೆ ಪಾಲಿಸಿ ಮಹಾಮಾರಿ ವೈರಸ್ಸನ್ನ ಮುಕ್ತ ಮಾಡುವುದಕ್ಕೆ ಇಲಾಖೆಗಳೊಂದಿಗೆ ಸಹಕರಿಸಬೇಕೆಂದರು