ಸರ್ಕಾರದ ಆದೇಶ ಉಲ್ಲಂಘಿಸಿದ ಖಾಸಗಿ ವಿದ್ಯಾಸಂಸ್ಥೆಗಳು

ದಾವಣಗೆರೆ.ಸೆ.೨೬;  ಖಾಸಗಿ ಶಾಲಾ ಕಾಲೇಜುಗಳಲ್ಲಿ ಬೋಧನಾ ಶುಲ್ಕವನ್ನು ಶೇಕಡಾ ಮೂವತ್ತು ರಷ್ಟು ಕಡಿಮೆ ಮಾಡಬೇಕೆಂಬ ಸರಕಾರದ ನಿಯಮವಿದ್ದರೂ ಸಹ ಜಿಲ್ಲೆಯ ಕೆಲವು ವಿದ್ಯಾ ಸಂಸ್ಥೆಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ಕೆ.ಎಲ್ ರಾಘವೇಂದ್ರ ತಿಳಿಸಿದರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆಯ ಪುಷ್ಪಾ ಮಹಾಲಿಂಗಪ್ಪ ಕಾಲೇಜಿನ ದ್ವಿತೀಯ ವಾರ್ಷಿಕ ದ್ವಿತೀಯ ಪಿಯುಸಿಯ ವಾರ್ಷಿಕ ಬೋಧನಾ ಐವತ್ತು ಸೌರ ಹಾಗೂ ಇತರ ಶುಲ್ಕ ಮೂವತ್ತ ಸೌರ ಒಟ್ಟು ಎಂಬತ್ತು ಶುಲ್ಕ ಎಂಬತ್ತು ಸಾವಿರ ಶುಲ್ಕ ಇದ್ದು ಸರ್ಕಾರದ ಆದೇಶದಂತೆ ಬೋಧನಾ ಶುಲ್ಕದಲ್ಲಿ ಶೇಕಡ ಮೂವತ್ತು ರಷ್ಟು ಕಡಿಮೆಯೆಂದರೆ ಹದಿನೈದು ಸಾವಿರ ರೂಗಳನ್ನು ಕಡಿತಗೊಳಿಸಿ ಇನ್ನುಳಿದ ಹಣವನ್ನು ಕಟ್ಟಿಸಿಕೊಳ್ಳಬೇಕು ಆದರೆ ಅವರು ಯಾವುದೇ ಕಾರಣಕ್ಕೂ ಶುಲ್ಕ ಕಡಿಮೆ ಮಾಡುವುದಿಲ್ಲ ಎನ್ನುವ ಉಡಾಫೆ ಉತ್ತರ ನೀಡುತ್ತಿದ್ದಾರೆ ಇದರಿಂದಾಗಿ ಪೋಷಕರು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸೆಪ್ಟೆಂಬರ್ ಮೂವತ್ತು ರಂದು ಸಿಇಟಿ ಕೌನ್ಸೆಲಿಂಗ್ ಇದ್ದು ಅನಿವಾರ್ಯವಾಗಿ ಪೋಷಕರು ಹಣ ಪಾವತಿ ಮಾಡುತ್ತಾರೆ ಎನ್ನುವ ಮನೋಭಾವವನ್ನು ಅರಿತಿರುವ ಆಡಳಿತ ಮಂಡಳಿಯವರು ಮುಲಾಜಿಲ್ಲದೆ ಪೂರ್ತಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ  ಜಿಲ್ಲಾಧಿಕಾರಿಗಳು, ಡಿಡಿಪಿಐ ಗಮನಹರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೋಸ್ಕರ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲಾಡಳಿತ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಮ್ ಆದ್ಮಿ ಪಕ್ಷ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು .ಶಾಲಾ ಆಡಳಿತ ಮಂಡಳಿಯ ಮೊಂಡುತನದಿಂದಾಗಿ ಪೋಷಕರಿಗೆ ದಿಕ್ಕು ತೋಚದಂತಾಗಿದೆ ಆತ್ಮಹತ್ಯೆಯ ಹಾದಿ ಹಿಡಿಯುವ ಅನಿವಾರ್ಯ ಪರಿಸ್ಥಿತಿಯೂ ಆಗಿದೆ ಇಲ್ಲವಾದಲ್ಲಿ ಮಕ್ಕಳ ಅನುಕೂಲಕ್ಕಾಗಿ ಶುಲ್ಕ ಪಾವತಿ ಅನಿವಾರ್ಯವಾಗಿದೆ ಸಾಲಸೋಲ ಮಾಡಿಯಾದರೂ ಹಣ ಪಾವತಿ ಮಾಡಬೇಕು ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಸಮೀರ್ ಹಸನ್, ಆದಿಲ್ ಖಾನ್, ಪೋಷಕ ವೆಂಕಟೇಶ್ ಇತರರು ಇದ್ದರುAttachments area