ಸರ್ಕಾರದ ಆದೇಶವನ್ನು ಖಂಡಿಸಿ ವ್ಯಾಪಾರಸ್ಥರು ಪ್ರತಿಭಟನೆ

ರಾಯಚೂರು, ಏ ೨೨- ಸರ್ಕಾರದ ಹೊಸ ಮಾರ್ಗಸೂಚಿ ಯಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿದ ಸರ್ಕಾರದ ಆದೇಶವನ್ನು ಖಂಡಿಸಿ ನಗರದ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ತರಕಾರಿ,ಕಿರಾಣಿ ಅಂಗಡಿ,ಹಣ್ಣಿನ ವ್ಯಾಪಾರಿಗಳಿಗೆ ನಿರ್ಬಂಧ ಹೇರಿಲ್ಲ.ಆದರೆ ಪೊಲೀಸರು ಎಲ್ಲ ವ್ಯಾಪಾರ ವಹಿವಾಟುಗಳಿಗೆ ಕಡಿವಾಣ ಹಾಕುತ್ತಿದ್ದಾರೆ ಎಂದು ದೂರಿದರು.ಸರ್ಕಾರವೇ ಶುಕ್ರವಾರದಿಂದ ರಾತ್ರಿ ಸೋಮವಾರದವರೆಗೆ ಕರ್ಫ್ಯೂ ಎಂದಿದೆ.ಅದರೆ ಹಗಲ್ಲಲ್ಲೇ ಕರ್ಫ್ಯೂ ಹೇರಲು ಹೊರಟಿದ್ದಾರೆ.ಸರ್ಕಾರದ ಆದೇಶ ಪ್ರತಿ ತೋರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮಾತನಾಡಿ.ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಜಾಸ್ತಿ ಯಾಗಿದ್ದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಒತ್ತಾಯಿಸಿದರು.