ಸರ್ಕಾರದ ಅನುದಾನ ಜನರಿಗೆ ಸದ್ಬಳಕೆಯಾಗಬೇಕು

ಕೋಲಾರ,ಮಾ,೨೮-ಸಾರ್ವಜನಿಕರಿಗೆ ಕಾಲಕ್ಕೆ ತಕ್ಕಂತೆ ಸರ್ಕಾರವು ಬಿಡುಗಡೆ ಮಾಡುವ ಅನುದಾನವನ್ನು ಸದ್ಬಳಿಸಿಕೊಳ್ಳುವಂತಾದಾಗ ಮಾತ್ರ ಸಾರ್ವಜನಿಕರಿಗೆ ಅನುಕೂಲಕರವಾಗುವುದು, ಅಧಿವೇಶನದಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳ ಕುರಿತು ಸಾಕಷ್ಟು ಭಾರಿ ಚರ್ಚಿಸಿ ಸರ್ಕಾರದಿಂದ ಅನುದಾನಗಳನ್ನು ಮಂಜೂರು ಮಾಡಿಸಿದ್ದರೂ ಸಹ ವಿವಿಧ ಕಾರಣಗಳಿಗೆ ಅನುಷ್ಟಾನಕ್ಕೆ ತರುವುದು ವಿಳಂಬವಾಯಿತು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು,
ನಗರದ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ,ಅರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಇತರೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿದ ಕಾಮಗಾರಿಗಳ ಶಂಖು ಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ರೂ ೫೩.೪೭ ಕೋಟಿ ವೆಚ್ಚದಲ್ಲಿ ಒಟ್ಟು ೨೯ ಕಾಮಗಾರಿಗಳನ್ನು ಲೋಕಾರ್ಪಡೆ ಮಾಡಲಾಯಿತು, ೧೭೪.೮೫ ಕೋಟಿ ರೂ ವೆಚ್ಚದಲ್ಲಿ ೪೦ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಗಿದೆ ಎಂದರು,
ಈ ಕಾಮಗಾರಿಗಳನ್ನು ಅದಷ್ಟು ಬೇಗಾ ಕಾರ್ಯಾದೇಶವನ್ನು ಪಡೆದು ಕಾಮಗಾರಿಗಳನ್ನು ಪ್ರಾರಂಭಿಸ ಬೇಕಾಗಿದೆ. ರಸ್ತೆಗಳು ಹದಗೆಟ್ಟ ವ್ಯವಸ್ಥೆಗಳಲ್ಲಿ ನನ್ನ ಕಣ್ಣ ಮುಂದೆಯೇ ರಸ್ತೆಗಳಲ್ಲಿ ಹಲವಾರು ಬಿದ್ದು ಕೈಕಾಲು ಮುರಿದು ಕೊಂಡಿರುವುದನ್ನು ನೋಡಿರುವುದು ಉಂಟು, ಈ ಸಂದರ್ಭದಲ್ಲಿ ಸಾರ್ವಜನಿಕರು ಜನಪ್ರತಿನಿಧಿಗಳನ್ನು ಸೇರಿದಂತೆ ಅಧಿಕಾರಿಗಳಿಗೂ ಹಿಡಿ ಶಾಪ ಹಾಕಿರುವುದನ್ನು ಕೇಳಿರುವುದು ಉಂಟು ಎಂದು ಹೇಳಿದರು.
ಮುಂದೆ ಬರಲಿರುವ ಮಳೆಗಾಲಕ್ಕೆ ಪ್ರಾರಂಭಕ್ಕೆ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಉಂಟಾಗ ಬಹುದಾಗಿದ್ದ ಅನಾಹುತಗಳನ್ನು ತಪ್ಪಿಸುವಂತಾಗ ಬೇಕು, ಸರ್ಕಾರವು ಬಿಡುಗಡೆ ಮಾಡಿರುವ ೨೫೩ ಕೋಟಿ ರೂಗಳಲ್ಲಿ ಗುಣಮಟ್ಟದ ಕಾಮಗಾರಿಗಳು ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ನಿಮ್ಮ ಪ್ರಮಾಣಿಕ ಸೇವೆ ತಲುಪುವಂತಾಗ ಬೇಕೆಂದು ಮನವಿ ಮಾಡಿದರು,