ಸರ್ಕಾರದಿಂದಲೇ ಸಂತ್ರಸ್ತೆಗೆ ರಕ್ಷಣೆ : ಎಚ್‍ಡಿಕೆ ಬಾಂಬ್

The Chief Minister of Karnataka, Shri H.D. Kumaraswamy meeting the Union Minister for Consumer Affairs, Food and Public Distribution, Shri Ram Vilas Paswan, in New Delhi on October 06, 2018.

ಮೈಸೂರು, ಮಾ. 14- ರಮೇಶ್ ಜಾರಕಿಹೊಳಿ ಸಿಡಿ ಕೇಸ್. ಸಂತ್ರಸ್ತ ಮಹಿಳೆಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅದು ಸಿಕ್ಕಿದ್ದು, ಆ ಹೆಣ್ಣು ಮಗಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಕ್ಕಿದೆ. ಸರ್ಕಾರದಿಂದ ಅವಳನ್ನು ಹುಡುಕಲು ಆಗದಿದ್ದರೂ ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ಪ್ರಕರಣದ ಬೆಳವಣಿಗೆಯನ್ನು ಗಮನಿಸಿದರೆ ಸಂತ್ರಸ್ತ ಯುವತಿಗೆ ಸರ್ಕಾರದ ಒಳಗಿನವರೇ ರಕ್ಷಣೆ ನೀಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ವಿರುದ್ಧ ಇರುವವರು ಇದನ್ನು ಬೆಂಬಲಿಸುವುದು ಮತ್ತಷ್ಟು ಹಾಸ್ಯಾಸ್ಪದವಾಗಿದೆ. ಆ ಸಂತ್ರಸ್ತ ಯುವತಿಗೆ ರಕ್ಷಣೆ ಸಿಕ್ಕಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯುವುದೋ ಎಂದು ಕಾದು ನೋಡೋಣ ಎಂದರು.
ಸರ್ಕಾರಕ್ಕೆ ನಿನ್ನೆ ಆಕೆ ವಿಡಿಯೋ ರೆಕಾರ್ಡ್ ಕಳುಹಿಸಿದ್ದಾಳೆ. ಅದಕ್ಕೆ ಬೇರೆ ಯಾರಾದರೂ ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ ಎಂದರು. ತನಿಖೆಯಿಂದ ಹೊರ ಬರಬೇಕು. ರಕ್ಷಣೆಯನ್ನು ಸರ್ಕಾರ ಕೊಟ್ಟಿದೆಯೋ, ವಿರುದ್ಧ ಇರೋರು ಕೊಟ್ಟಿದ್ದಾರೋ ಗೊತ್ತಿಲ್ಲ ಅಥವಾ ಸರ್ಕಾರ ರಚನೆಗೆ ಈತನ ಸಹಾಯ ಪಡೆದವರು ಈತನ ಸ್ಪೀಡ್ ಕಟ್ ಮಾಡೋಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಲ್ಲಿ ಡಿಕೆಶಿ ಹೆಸರು ಎಂಬ ವಿಚಾರ ಯಾರು ಅವರ ಹೆಸರು ಹೇಳಿದ್ದಾರೆ. ಅವರ ಹೆಸರನ್ನೇ ಏಕೆ ಮುಂದೆ ಇಟ್ಟುಕೊಂಡಿದ್ದಾರೆ, ಅವರೇ ಮಾಡಿದ್ದಾರೆ ಅಂತ ಯಾರಾದರೂ ಹೇಳಿದರಾ? ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇಲ್ಲ. ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳೆಯುತ್ತಿದ್ದಾರೆ.
ಯಾವ ಮಹಾನ್ ನಾಯಕರು ಎಂಬುದು ಗೊತ್ತಿಲ್ಲ. ಇವರು ತಾವೇ ಅಂತ ಯಾಕೆ ಅಂದುಕೊಂಡರೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಬಹಳ ನುರಿತ ರಾಜಕಾರಣಿ. ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನು ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೋ ಗೊತ್ತಿಲ್ಲ. ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಟಿಡಿಗೆ ಜೆಡಿಎಸ್ ಬಾಗಿಲು ಮುಚ್ಚಿತು. ನನ್ನ ರಾಜಕೀಯ ಜೀವನದಲ್ಲಿ ಬಹಳ ಅನುಭವ ಆಗಿದೆ. ಜಿ.ಟಿ. ದೇವೇಗೌಡರನ್ನು ವಾಪಾಸ್ ಜೆಡಿಎಸ್‍ಗೆ ಕರೆಸಿಕೊಳ್ಳುವ ಪ್ರಶ್ನೆ ಇಲ್ಲ. ಅವರಾಗೆ ಅವರು ನಮ್ಮಿಂದ ದೂರ ಹೋಗಿದ್ದಾರೆ. ಸಾ.ರಾ.ಮಹೇಶ್ ಕಾರಣಕ್ಕೆ ದೂರ ಹೋಗ್ತಿದ್ದೀನಿ ಅಂತಾ ಹೇಳಿದ್ದಾರೆ. ಸಾ.ರಾ.ಮಹೇಶ್ ಅವರಿಗೆ ಅಂತದ್ದು ಏನ್ ಮಾಡಿದ್ದಾರೋ ಗೊತ್ತಿಲ್ಲ. ಸಾ.ರಾ.ಮಹೇಶ್ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಲು ನಾನೇನೂ ಕೋಲೆ ಬಸವ ಅಲ್ಲ, ಅವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಬರುವುದಕ್ಕೆ. ಜಿಟಿಡಿ ಮತ್ತೆ ಜೆಡಿಎಸ್ ಗೆ ಬರ್ತಿನಿ ಅಂದರೂ ನಾವು ಕರೆಸಿಕೊಳ್ಳಲ್ಲ. ಜಿಟಿಡಿ ಬಗ್ಗೆ ಎಚ್.ಡಿ.ದೇವೇಗೌಡರಿಗೆ ಸ್ವಲ್ಪ ಮೃದುಧೋರಣೆ ಇತ್ತು. ಈಗ ಅವರಿಗೂ ಸತ್ಯಾಂಶ ಮನವರಿಕೆ ಮಾಡಿಕೊಟ್ಟಿದ್ದೇನೆ. ಇಂಥವರ ಸಹವಾಸ ಬಿಡಬೇಕು. ಇಲ್ಲದೆ ಇದ್ದರೆ ವಿಷವಾಗಿ ಹಾಳು ಮಾಡುತ್ತಾರೆ. ನಾನು ಈ ಪಕ್ಷದಲ್ಲಿ ಸಕ್ರಿಯನಾಗಿ ಕೆಲಸ ಮಾಡುವ ದಿನದವರೆಗೂ ಜಿಟಿಡಿಯನ್ನು ಜೆಡಿಎಸ್‍ಗೆ ಮತ್ತೆ ಸೇರಿಸುವ ಪ್ರಶ್ನೆ ಇಲ್ಲ. ದುರಾಂಕಾರದಲ್ಲಿ ಮಾತಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ. ಆದರೂ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆಂದು ಜಿಟಿಡಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಜಿಟಿಡಿಗೆ ಆರ್ಥಿಕ ನಿರ್ವಹಣೆ ಕೊಡಲಿಲ್ಲ ಅಂತಾ ಅವರು ಚುನಾವಣೆಯಲ್ಲಿ ಆಸಕ್ತಿ ತೋರಲಿಲ್ಲ. ಇಲ್ಲದೆ ಇದ್ದರೆ ಅವತ್ತೇ ಆ ಚುನಾವಣೆಯನ್ನು 10 ಸಾವಿರ ಮತಗಳಿಂದ ಗೆಲ್ಲುತ್ತಿದ್ದೆವು ಎಂದರು.