ಸರ್ಕಾರದಿಂದಲೇ ರಾಜ್ಯದ ಮರ್ಯಾದೆ ಹರಾಜು ರೈತ ಸಂಘದಿಂದ ಆರೋಪ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.16:   ರಾಜ್ಯದ ಜನರ ಹಿತ ಕಾಯಬೇಕಾದ ಸರ್ಕಾರ ರಾಜಕೀಯ ಕಾರಣಕ್ಕಾಗಿ ರಾಜ್ಯದ ಮಾನಹಾನಿ ಕಾರ್ಯಕ್ಕೆ ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ರೈತ ಸಂಘ ಹಾಗೂ ಹಸಿರು ಸೇನೆ  ಜಿಲ್ಲಾಧ್ಯಕ್ಷ ಜೆ.ಎನ್.ಕಾಳಿದಾಸ್ ಆರೋಪಿಸಿದರು.
ಹೊಸಪೇಟೆಯ ಪತ್ರಿಕಾ ಭವನದಲ್ಲಿ  ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬರಗಾಲದ ಪರಿಹಾರವಿಲ್ಲದ ಈ ಸಮಯದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಸಿಡಿ, ಚಂಬು ಸೇರಿದಂತೆ ತಮ್ಮ ರಾಜಕೀಯ ಪಾರುಪತ್ಯಕ್ಕೆ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡು ರಾಜ್ಯದ ರಾಜಕಾರಣಕ್ಕೆ ಮಸಿ ಬಳೆಯುವ ಕಾರ್ಯದಲ್ಲಿ ತೊಡಗಿಕೊಂಡಿವೆ, ಬರಗಾಲ ಒಂದು ವರ್ಷ ಕಳೆದರು ಪರಿಹಾರ ನೀಡಿ ಅನ್ನದಾತನ ಬದುಕು ಹಸನು ಮಾಡುವ ಬದಲು ಆರೋಪಿಸುತ್ತಾ ಕಾಲ ಹರಣ ಮಾಡುತ್ತಿದ್ದಾನೆ, ಮತ್ತೊಂದಡೆ ಕೇಂದ್ರ ಸರ್ಕಾರದ ಬರ ಪರಿಹಾರ ರೈತರಿಗೆ ನೀಡಿದ್ದರೂ ಆದರೆ ಇದನ್ನು ಕೇವಲ ಮುಂಗಾರಿಗೆ ಮಾತ್ರ ಸಿಮಿತಗೊಳಿಸಿದ್ದು ಸರಿಯಲ್ಲಾ ಹಿಂಗಾರಿಗೂ ವಿಸ್ತರಿಸಬೇಕು ಎಂದರು.
ಸೋಮವಾರ ಪ್ರತಿಭಟನೆ:
ರೈತರ ವಿವಿಧ ಬೇಡಿಕೆ ಈಡೇರಿಸಲು ರೈತರು ಆಗ್ರಹಿಸಿ ಇದೆ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾಗಿ ತಿಳಿಸಿದರು. ಇದೆ 20ರ ಸೋಮವಾರ ಗಾಂಧಿವೃತ್ಯದಿಂದ ತಹಶಿಲ್ದಾರರ ಕಛೇರಿಯ ವರೆಗೂ ಪ್ರತಿಭಟನೆ ನಡೆಸುವುದಾಗಿ ಇದೆ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್, ಮಲ್ಲಿಕಾರ್ಜುನ, ರುದ್ರಪ್ಪ, ಹೇಮರಡ್ಡಿ, ಕೊಟ್ರೇಶಪ್ಪ, ಹನುಮಂತ, ನಾಗರಾಜ್ ಇತರರು ಹಾಜರಿದ್ದರು.