ಸರ್ಕಾರದಲ್ಲಿ ಪ್ರಬಲ ನಾಯಕತ್ವ ಮತ್ತು ಬದ್ಧತೆಯು ವಿಶ್ವದ ಅತಿದೊಡ್ಡ ಆರ್ಥಿಕತೆಯತ್ತ ಸಾಗಲು ಮುನ್ನಡೆಸುತ್ತದೆ: ತೇಜಸ್ವಿ ಸೂರ್ಯ

ಕಲಬುರಗಿ; ಮಾ.23:ಶ್ರೀ ನರೇಂದ್ರ ಮೋದಿ ಅವರ ಸಮರ್ಥ ಮತ್ತು ಬಲಿಷ್ಠ ನಾಯಕತ್ವದಲ್ಲಿ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ ಮತ್ತು ಶ್ರೀ ಮೋದಿಯವರ ದೂರದೃಷ್ಟಿಯ ನಾಯಕತ್ವವು ದೇಶವನ್ನು ಬಲಿಷ್ಠಗೊಳಿಸಿದ್ದಲ್ಲದೆ, ಆಂತರಿಕ ಮತ್ತು ಬಾಹ್ಯ ಬೆದರಿಕೆಗಳ ವಿರುದ್ಧ ಸುರಕ್ಷಿತವಾಗಿಯೂ ಮಾಡಿದೆ ಎಂದು ಭಾರತೀಯ ಯುವ ಜನತಾ ಮೋರ್ಚಾದ (ಬಿವೈಜೆಎಂ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಶ್ರೀ ತೇಜಸ್ವಿ ಸೂರ್ಯ ಹೇಳಿದರು.

ಗುರುವಾರ ಕಲಬುರಗಿ ನಗರದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ನಡೆದ ಬಿವೈಜೆಎಂನ “ಯುವ ಸಂವಾದ” ಕಾರ್ಯಕ್ರಮದ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸೂರ್ಯ, ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳು ಎದುರಿಸುತ್ತಿರುವ ಬಿಕ್ಕಟ್ಟಿನ ನಡುವೆ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿನ ಸಾಟಿಯಿಲ್ಲದ ಬೆಳವಣಿಗೆಯು, ಭಾರತವನ್ನು ಪ್ರಮುಖ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿ ಸಾಗಿದೆ ಮತ್ತು ಒಟ್ಟಾರೆ ಬೆಳವಣಿಗೆಯನ್ನು ಸಾಧಿಸಲು ದೇಶದಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಕೇಂದ್ರದ ಬಿಜೆಪಿ ಸರ್ಕಾರವು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ತೆರೆದಿದೆ ಹಾಗೂ ದಾಖಲೆ ಸಂಖ್ಯೆಯ ವೈದ್ಯಕೀಯ ಸೀಟುಗಳನ್ನು ಸೇರಿಸಿ ಸಮಾಜದ ಬಡ ವರ್ಗಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ತೆರೆದಿದೆ ಎಂದು ಶ್ರೀ ಸೂರ್ಯ ಹೇಳಿದರು.

ಕಳೆದ ಒಂಬತ್ತು ವರ್ಷಗಳಲ್ಲಿ, ಭಾರತ ದೇಶದಲ್ಲಿ ಸುಮಾರು 72 ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸುವಲ್ಲಿ ದೇಶವು ದಾಖಲೆಯ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ದಾಖಲೆಯ ಕಿಲೋಮೀಟರ್‍ಗಳಷ್ಟು ಅಭಿವೃದ್ಧಿ ಪಡಿಸಿದೆ ಎಂದು ಅವರು ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ ನಾಗರಿಕರ ಮೇಲೆ ಭಯೋತ್ಪಾದಕರು ನಡೆಸಿದ ಯಾವುದೇ ದೊಡ್ಡ ದಾಳಿಗೆ ದೇಶವು ಸಾಕ್ಷಿಯಾಗಿಲ್ಲ ಮತ್ತು ಭಯೋತ್ಪಾದಕರ ಪುಲ್ವಾಮಾ ದಾಳಿಯು ಕೊನೆಯ ಪ್ರಮುಖ ದಾಳಿಯಾಗಿದೆ ಮತ್ತು ಅದು ಸಹ ಸಶಸ್ತ್ರ ಪಡೆಗಳ ವಿರುದ್ಧ ನಿರ್ದೇಶಿಸಲ್ಪಟ್ಟಿದೆ. ಗಡಿಯಾಚೆಗಿನ ದಾಳಿಗೆ ಕಾರಣರಾದವರಿಗೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ ಎಂದರು.

ಭಾರತವು ಡಿಜಿಟಲ್ ಆರ್ಥಿಕತೆಯಲ್ಲಿ ಕ್ರಾಂತಿಯನ್ನು ಮಾಡಿ, ಮಂಚೂಣಿಯಲ್ಲಿದೆ ಮತ್ತು ಭಾರತವು ಕೋವಿಡ್-19 ವಿರುದ್ಧ ಹೋರಾಡಲು ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಇಡೀ ಜನಸಂಖ್ಯೆಯನ್ನು ಒಳಗೊಳ್ಳುವ ಗುರಿಯನ್ನು ಸಾಧಿಸಿದ ಏಕೈಕ ದೇಶವಾಗಿದೆ ಎಂದು ಶ್ರೀ ಸೂರ್ಯ ಹೇಳಿದ್ದಾರೆ. ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ದೇಶವೂ ಇದನ್ನು ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ಅದರ ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆಯನ್ನು ಒದಗಿಸಲು ಹೆಣಗಾಡಿತು ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ಸರ್ಕಾರವು ಇಲ್ಲಿಯವರೆಗೆ ಪ್ರಾರಂಭಿಸಿದ ಕ್ರಮಗಳ ಎಲ್ಲಾ ಪ್ರಯೋಜನಗಳನ್ನು ಸಾಧಿಸಲು ಭಾರತಕ್ಕೆ ಮುಂದಿನ 25 ವರ್ಷಗಳು ನಿರ್ಣಾಯಕವಾಗಿವೆ ಮತ್ತು ಮುಂದಿನ 25 ವರ್ಷಗಳ ಕಾಲ ಬಲವಾದ ಮತ್ತು ಬದ್ಧತೆಯ ಸರ್ಕಾರವು ಈ ಸಮಯದ ಅಗತ್ಯವಾಗಿದೆ. “ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇನ್ನೂ 15 ವರ್ಷಗಳು ದೇಶವು ಪ್ರಮುಖ ರಾಜಕೀಯ ಶಕ್ತಿಯಾಗುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.

ರಾಜವಂಶದ ರಾಜಕೀಯದ ಬಗ್ಗೆ ವಿದ್ಯಾರ್ಥಿನಿ ನಂದಿತಾ ಕೇಳಿದ ಪ್ರಶ್ನೆಗೆ, ಶ್ರೀ ಸೂರ್ಯ ಅವರು ವಂಶಾಡಳಿತ ರಾಜಕೀಯದಲ್ಲಿ ನಂಬಿಕೆ ಹೊಂದಿಲ್ಲ ಮತ್ತು ಭಾರತೀಯ ಜನತಾ ಪಕ್ಷವು ಸಮಾಜದ ಎಲ್ಲಾ ವರ್ಗದವರಿಗೆ ಅವಕಾಶಗಳನ್ನು ಒದಗಿಸಿದೆ. ಶ್ರೀ ನರೇಂದ್ರ ಮೋದಿ ಅವರಂತಹ ಶ್ರೀಸಾಮಾನ್ಯರಿಗೆ ಪ್ರಧಾನಿಯಾಗಲು ಹಾಗೂ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಭಾರತದ ರಾಷ್ಟ್ರಪತಿಯಾಗಲು ಅನುವು ಮಾಡಿಕೊಟ್ಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಈ ಸಂಧರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ ಮಾತನಾಡಿದರು. ಪ್ರಮುಖರಾದ ವಿವಿಯ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೆÇ್ರ.ಶೃತಿ ವಂದಿಸಿದರು.