ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ವಂಚನೆ: ಕ್ರಮಕ್ಕೆ ಮನವಿ


ದಾವಣಗೆರೆ.ಸೆ.೩; ತಾಲ್ಲೂಕಿನ ಆಲೂರುಹಟ್ಟಿಯ ಶ್ರೀ ರಂಗನಾಥ ವಿದ್ಯಾಸಂಸ್ಥೆಯವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ಎಸ್ಸಿ,ಎಸ್ಟಿ ಅನುದಾನವನ್ನು ಪಡೆದು ವಂಚನೆ ಮಾಡಿದ್ದಾರೆ ಎಂದು ರೈತ ಮುಖಂಡ ಚಿನ್ನಸಮುದ್ರ ಶೇಖರನಾಯ್ಕ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಂಸ್ಥೆಯವರು ಸಮಾಜಕಲ್ಯಾಣ ಇಲಾಖೆಯಿಂದ ಶಾಲೆಯ ಕಟ್ಟಡ ನಿರ್ಮಾಣಕ್ಕೆಂದು 50 ಲಕ್ಷ ಮಂಜೂರಾತಿಯನ್ನು ಮತ್ತು ಹೆಚ್ಚುವರಿಯಾಗಿ ಮತ್ತೆ 50 ಲಕ್ಷ ರೂ.ಗಳನ್ನು ಮಂಜೂರಾತಿ ಮಾಡಿಕೊಂಡು, ಒಟ್ಟಾರೆ 1 ಕೋಟಿ ಸಹಾಯಧನ ಪಡೆದಿದ್ದು, ಈ ಸಂಸ್ಥೆಯು ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ, ನಿಯಮಬಾಹಿರವಾಗಿ ಸಹಾಯಧನವನ್ನು ಪಡೆದಿದ್ದಾರೆ ಎಂದು ಆರೋಪಿಸಿದರು. ಸಹಾಯಧನ ನೀಡುವ ಮೊದಲು ದಾಖಲಾತಿಗಳನ್ನು ಹಾಗೂ ಸರ್ಕಾರದ ಸುತ್ತೋಲೆಯ ಷರತ್ತುಗಳನ್ನು ಪಾಲಿಸದೆ ಇರುವುದನ್ನು ಗಮನಿಸಿದರೆ ಉದ್ದೇಶ ಪೂರಕವಾಗಿ ರ್ದುಲಾಭ ಮಾಡಿಕೊಳ್ಳುವ ಉದ್ದೇಶದಿಂದ ಹಂತ ಹಂತವಾರು ಹಣ ಬಿಡುಗಡೆ ಮಾಡಿದ್ದಾರೆ. ಹಾಗೂ ಈ ಸಂಸ್ಥೆಯವರು ಈ ಹಿಂದೆ ಸ್ಥಳೀಯ ಶಾಸಕರ ನಿಧಿಯಲ್ಲಿ ಹಣ ಪಡೆದಿದ್ದು, ನಿಯಮ ಉಲ್ಲಂಘಿಸಿರುವುದು ರುಜುವಾತು ಪಟ್ಟಿದ್ದು, 6.22 ಲಕ್ಷ ರೂ.ಗಳನ್ನು  ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಡಿ.ಡಿ.ಮೂಲಕ ಹಿಂದಿರುಗಿಸಿದ್ದಾರೆ ಆದರೆ ಇನ್ನುಳಿದ ಬಡ್ಡಿ ಮೊತ್ತವು ಕಟ್ಟದೆ ನಮ್ಮ ಸಂಸ್ಥೆಯು ಆರ್ಥಿಕವಾಗಿ ಸದೃಢತೆ ಇರುವುದಿಲ್ಲ ಎಂದು  ಜಿಲ್ಲಾಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ. ಹಾಗಾದರೆ ಸಧೃಢತೆ ಇಲ್ಲದ ಸಂಸ್ಥೆಗೆ ಸಹಾಯಧನ ಬಿಡುಗಡೆಗೊಳಿಸಿರುವುದು ಘೋರ ತಪ್ಪಾಗಿರುತ್ತದೆ ಎಂದು ತಿಳಿದುಕೊಳ್ಳಬೇಕಿತ್ತು. ಈ ಸಂಸ್ಥೆಯ ಕಾರ್ಯದರ್ಶಿಯಾದ ಮಾಜಿ ಶಾಸಕರು ಸ್ವಂತ ಸಂಸ್ಥೆಗೆ ಸ್ಥಳೀಯ ಶಾಸಕರ ಅನುದಾನವನ್ನು ನಿಯಮಬಾಹಿರವಾಗಿ ಬಳಸಿಕೊಂಡಿದ್ದಾರೆ ಮುಖ್ಯ ಚುನಾವಣಾಧಿಕಾರಿಗಳಿಗೆ ದಾಖಲಾತಿ ಸಮೇತ ಶಿಸ್ತುಕ್ರಮಕ್ಕಾಗಿ  ಜಿಲ್ಲಾಧಿಕಾರಿಗಳಿಂದ ಪತ್ರ ಬರೆಯಲಾಗಿದೆ. ಈ ಸಂಸ್ಥೆಯವರು ಸರ್ಕಾರಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕ ಹಣ ಹಾಗೂ ಸರ್ಕಾರದ ಹಣವನ್ನು ವಂಚನೆ ಮಾಡಿದ್ದಾರೆ ಎಂದರು.ಈ ಕೂಡಲೇ ಸಂಸ್ಥೆಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.ಸುದ್ದಿಗೋಷ್ಠಿಯಲ್ಲಿ ಶತಕೋಟಿ ಬಸಣ್ಣ,ಗಣೇಶ್ ಕೆ,ಬಸವರಾಜ್ ಜಿ.ಹೆಚ್, ಮಹಮ್ಮದ್ ಯೂಸೂಪ್,ಶಶಿಕುಮಾರ್, ಸೋಮಶೇಖರ್ ಇದ್ದರು

Attachments area

ReplyForward