ಸರ್ಕಾರಕ್ಕೆ ಮನವಿ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಆ8: ವಾರದ ಹಿಂದೆ ಸುರಿದ ಮಳೆಯಿಂದಾಗಿ ಮನೆಗಳು ಬಿದ್ದಿವೆ ಅವುಗಳನ್ನು ಪರಿಶೀಲಿಸಿ ಯೋಗ್ಯ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸರಕಾರ ಮುಂದಾಗಬೇಕೆಂದು ಸ್ವಾಭಿಮಾನಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ ಹೇಳಿದರು.
ಬೈಲಹೊಂಗಲದಲ್ಲಿಯ ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು ಈ ಹಿಂದೆ 2021-22ರಲ್ಲಿ ಮಳೆಗೆ ನೆಲಕಚ್ಚಿದಂತಹ ಮನೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೇ ರದ್ದು ಮಾಡಿರುವುದರಿಂÀದ ಮನೆ ಕಳೆದುಕೊಂಡವರು ಕಷ್ಟ ಅನುಭವಿಸುವಂತಾಗಿದೆ. ಮರುಪರಿಶೀಲನೆ ಮಾಡಿ ನ್ಯಾಯ ಒದಗಿಸಿಬೇಕು ಎಂದರು.
2022-23ರಲ್ಲಿ ಸಾಕಷ್ಟು ಜನ ಮಳೆಯಿಂದ ಮನೆ ಕಳೆದುಕೊಂಡಿದ್ದಾರೆ. ತಹಶೀಲ್ದಾರ ಸೇರಿದಂತೆ ಎಲ್ಲ ಅಧಿಕಾರಿಗಳು ಜೊತೆಗೂಡಿ ಪ್ರಮಾಣಿಕತೆಯಿಂದ ಪರಿಶೀಲನೆ ಮಾಡಿ ಯೋಗ್ಯ ಫಲಾನುಭವಿಗಳಿಗೆ ಸರ್ಕಾರದ ಸಹಾಯಹಸ್ತ ದೊರಕಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.