ಸರೋಜಾ ಹಿಂದೆ ಯೋಗಿ..

ನಟ ಲೂಸ್ ಮಾದ ಯೋಗಿ ಅವರು ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದರ ಸಾಲಿಗೆ ಇದೀಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ.

ಹೊಸ ಚಿತ್ರದಲ್ಲಿ ಅವರು ಸರೋಜಾ ಹಿಂದೆ ಬಿದ್ದಿದ್ದಾರೆ.ಆ ಸರೋಜಾ ಯಾರು ಎನ್ನುವುದು ಸದ್ಯಕ್ಕಿರುವ ಕುತೂಹಲದ ಪ್ರಶ್ನೆ. ‘ಮಡಮಕ್ಕಿ’ ಚಿತ್ರ ನಿರ್ದೇಶನ ಮಾಡಿದ್ದ ವಿನಯಪ್ರೀತಮ್ ಒಂದಷ್ಟು ಸಮಯದ ನಂತರ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಅದುವೇ “ನಾನು ಅದು ಮತ್ತು ಸರೋಜ” ಪೂಜಾ ವಸಂತಕುಮಾರ್ ನಿರ್ಮಾಣ ಮಾಡುತ್ತಿದ್ದು ಮೊದಲ ಬಾರಿಗೆ ಬಂಡವಾಳ ಹೂಡಿದ್ದಾರೆ.

ಲೂಸ್ ಮಾದ ಯೋಗಿ ಮತ್ತು ದತ್ತಣ್ಣ ಕಾಂಬಿನೇಷನ್‍ದಲ್ಲಿ ಚಿತ್ರದಲ್ಲಿ ಮೂಡಿಬಂದಿದ್ದು ಇದೊಂದುಸಸ್ಪೆನ್ಸ್, ಥ್ರಿಲ್ಲರ್ ಸೇರಿ ಮನರಂಜನೆ ಹೊಂದಿರುವ ಚಿತ್ರ‌ ಸರೋಜಳಾಗಿ ಅಪೂರ್ವಭಾರದ್ವಾಜ್ ಇವರೊಂದಿಗೆ ಪ್ರೇರಣಾ, ಪ್ರಸನ್ನ ಇನ್ನು ಮುಂತಾದವರಿದ್ದಾರೆ.

ಎಲ್ಲರಿಗೂ ಇಷ್ಟವಾಗುವ ಕತೆಯನ್ನು ತೆರೆಯ ಮೇಲೆ ಕಟ್ಟಿ ಕೊಡಲಾಗುತ್ತಿದೆ.ಹೀಗಾಗಿ ಕಥೆಯ ಸುಳಿವನ್ನು ಹೇಳಲು ಆಗುವುದಿಲ್ಲ. ಡಾರ್ಕ್ ಕಾಮಿಡಿ ಚಿತ್ರ ಎಂದಷ್ಟೇ ಹೇಳಬಹುದು. ಮಿಕ್ಕಂತೆ ಎಲ್ಲವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎನ್ನುವುದು ನಿರ್ದೇಶಕರ ವಿವರಣೆ.

ಒಂದು ಹಗಲು ಹಾಗೂ ಎರಡು ರಾತ್ರಿಗಳ ಮಧ್ಯೆ ನಡೆಯಲಿರುವುದರಿಂದ. ಶೇಕಡ 80ರಷ್ಟು ಚಿತ್ರೀಕರಣ ರಾತ್ರಿ ಸಮಯದಲ್ಲಿ ಸೆರೆಹಿಡಿಯಲಾಗದೆ ಎಂದು ವಿವರ ನೀಡಿದರು

ಪ್ರಸಾದ್.ಕೆ.ಶೆಟ್ಟಿ ಸಂಗೀತ, ಮಹೇಂದ್ರಸಿಂಹ ಛಾಯಾಗ್ರಹಣ, ಸುರೇಶ್‍ಆರ್ಮುಗಂ ಸಂಕಲನವನ್ನು ನಿರ್ವಹಿಸಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್‍ದಲ್ಲಿ ಬ್ಯುಸಿ ಇದ್ದು, ಮೇ ತಿಂಗಳಿಂದ ಪ್ರಚಾರ ಮಾಡಲು ಸಿದ್ದತೆ ಮಾಡಿಕೊಂಡಿದೆ.

ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಚಿತ್ರತಂಡ ತೆರೆಮರೆಯಲ್ಲಿ ಚಿತ್ರದ ಕೆಲಸ ಕಾರ್ಯಗಳು ನಡೆಯುತ್ತಿದ್ದೆ. ಚಿತ್ರರಂಗ ಸಹಜ ಸ್ಥಿತಿಗೆ ಬಂದ ನಂತರ ಚಿತ್ರದ ಇನ್ನಿತರ ಕೆಲಸ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದೆ