ಸರಿಯಾದ ಬೆಲೆ ಸಿಗದೆ ಬೇಸತ್ತ ರೈತ : ಬದನೆಕಾಯಿ ರಸ್ತೆಗೆ ಸುರಿದು ಆಕ್ರೋಶ

ಕಲಬುರಗಿ:ಮೇ.02: ಜನತಾ ಕರ್ಫ್ಯೂ ಜಾರಿ ಹಿನ್ನೆಲೆ ಬೆಳೆದ ಬದನೆಕಾಯಿ ಮಾರಾಟ ಮಾಡಲು ಆಗದೆ‌ ರೈತನೋರ್ವ ರಸ್ತೆ ಮೇಲೆ ಬದನೆಕಾಯಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದೆ.
ಕರ್ಫ್ಯೂನಿಂದಾಗಿ ರಾಜ್ಯದ ಜನತೆ, ವ್ಯಾಪಾರಸ್ಥರು, ರೈತರು, ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ದುಡಿಯುವ ವರ್ಗಕ್ಕೆ ದಾರಿ ತೋಚದಂತಾಗಿದೆ. ಅಫಜಲಪೂರ ತಾಲೂಕಿನ ಬಳೂರ್ಗಿ ಗ್ರಾಮದ ಮಲ್ಲಿನಾಥ ಸೋಮಜಾಳ ಎಂಬ ಯುವ ರೈತ ನಡು ರಸ್ತೆಯಲ್ಲಿ ಬದನೆ ಕಾಯಿಯನ್ನು ಸುರಿದು ಅಸಮಾಧಾನ ಹೊರಹಾಕಿದ್ದಾರೆ.
ಸಾಕಷ್ಟು ವೆಚ್ಚ ಭರಿಸಿ ಕಷ್ಟಪಟ್ಟು ಬದನೆಕಾಯಿ ಬೆಳೆದಿದ್ದೆ. ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಂದಾಗ ಪ್ರತಿ ಕ್ಯಾನ್​ಗೆ ಮಾರಾಟಗಾರರು 10 ರಿಂದ 20 ರೂ.ಗಳಿಗೆ ಕೇಳುತ್ತಿದ್ದಾರೆ. ರಿಟೇಲ್ ಮಾರಾಟ ಮಾಡಬೇಕು ಎಂದರೆ ಜನರು ಬರ್ತಿಲ್ಲ. ಇದರಿಂದ ತುಂಬಾ ನಷ್ಟವಾಗುತ್ತಿದೆ ಎಂದು ರೈತ ನೋವನ್ನು ತೋಡಿಕೊಂಡರು.