ಸರಿಗಮಪ ಗ್ರ್ಯಾಂಡ್ ಫಿನಾಲೆ:೬ ಮಕ್ಕಳಲ್ಲಿ ಗೆಲುವು ಯಾರಿಗೆ

ಬೆಂಗಳೂರು,ಏ.೧೩-ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲೀಟಲ್ ಚಾಪ್ಸ್ ಸೀಸನ್ ೧೯ರ ಗ್ರಾಂಡ್ ಫಿನಾಲೆ ಇದೇ ಶನಿವಾರ ಭಾನುವಾರ ನಡೆಯಲಿದೆ. ೬ ಮಕ್ಕಳು ಅಂತಿಮ ಹಣಾಹಣಿ ನಡೆಸಲಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಶನಿವಾರ ಮತ್ತು ಭಾನುವಾರ ಸಂಜೆ ೬:೩೦ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಕೊಪ್ಪಳದಲ್ಲಿ ಈಗಾಗಲೇ ಪ್ರೋಗ್ರಾಮ್ ನಡೆದಿದೆ. ಫೈನಲ್‌ನಲ್ಲಿ ಪ್ರಗತಿ ಬಿ ಬಡಿಗೇರ್, ತನುಶ್ರೀ, ಕುಶಿಕ್, ಶಿವಾನಿ, ರೇವಣಸಿದ್ಧ, ಗುರುಪ್ರಸಾದ್ ಇದ್ದು, ಈ ೬ ಜನರು ಈಗಾಗಲೇ ಕರ್ನಾಟಕ ಜನರ ಮನ ಗೆದ್ದಿದ್ದು ಇದರಲ್ಲಿ ಯಾರು ವಿನ್ನರ್ ಆಗ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾದ ಮಹಾಗುರು ಹಂಸಲೇಖ, ಇವರ ಜೊತೆ ಜಡ್ಜ್‌ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಾಗೂ ಎಲ್ಲರನ್ನು ತಮ್ಮ ನಿರೂಪಣೆ ಮೂಲಕ ಗಮನ ಸೆಳೆವ ಅನುಶ್ರೀ ಇರಲಿದ್ದು ಪ್ರೇಕ್ಷಕರಿಗೆ ಹಾಡಿನ ರಸದೌತಣ ನೀಡಲು ಸಜ್ಜಾಗಿದ್ದಾರೆ.
ಸದ್ಯ ಈ ಸರಿಗಮಪ ಕಾರ್ಯಕ್ರಮದಿಂದ ಎಷ್ಟೋ ಪ್ರತಿಭಾನ್ವಿತರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‌ನಲ್ಲಿ ವಿನ್ನರ್ ಕಿರೀm ಯಾರೂ ಮುಡಿಗೇರಿಸಿಕೊಳ್ತಾರೆ ಅಂತ ಶನಿವಾರ-ಭಾನುವಾರ ಬರುವವರೆಗೂ ಕಾಯಬೇಕಿದೆ.