ಜೇವರ್ಗಿ:ಜೂ.8 : ಸರಾಯಿ ಬಡಜನರ ಜೀವ ನುಂಗುವುದಲ್ಲದೆ ಸಂಸಾರವನ್ನೆ ಹಾಳುಮಾಡಿದೆ, ಆದರೆ ಈ ಸರಾಯಿ ಗೌನಳ್ಳಿ ಎಂಬ ಪುಟ್ಟ ಗ್ರಾಮವನ್ನೆ ಹಾಳುಮಾಡುತ್ತಿದೆ. ಸರಾಯಿ ಮಾರಾಟವನ್ನು ತಡೆದು ಗ್ರಾಮವನ್ನು ಉಳಿಸಿ, ಇಲ್ಲವಾದಲ್ಲಿ ಒಂದಿಷ್ಟು ವಿಷ ಕೋಡಿ ಎಂದು ಹೋರಾಟಗಾರ ರವಿಚಂದ್ರ ಗುತ್ತೆದಾರ ಗ್ರಾಮಸ್ಥರ ಪರವಾಗಿ ಮನವಿಮಾಡಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ನೂರಾರು ಮಹಿಳೆಯರು ಸೇರಿಕೊಂಡು ಗೌನಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯ ಮುಖಾಂತರ ಮನವಿ ಸಲ್ಲಿಸಿದರು.
ಪ್ರತಿಭಟಮೆಯನ್ನುದ್ದೆಶಿಸಿ ರವಿಚಂದ್ರ ಗುತ್ತೆದಾರ ಮಾತನಾಡಿ ಹಳ್ಳಿಗಳಲ್ಲಿ ಬಾರ್‍ಗಳಿಲ್ಲದೆ ಶಾಂತಿಯಿಂದ ಜೀವನೆ ನಡೆಸಬಹುದು ಎಂದು ಅಂದುಕೊಂಡಿದ್ದೆವೆ, ಆದರೆ ಇದು ಸುಳ್ಳು ಎಂದು ಗೌನಳ್ಳಿ ಗ್ರಾಮ ನೋಡಿದರೆ ಅನಿಸುತ್ತದೆ. ನಮ್ಮ ಜೇವರ್ಗಿ ಪಟ್ಟಣದಲ್ಲಿ ಸಾಮಾನ್ಯವಾಗಿ ಸುಮಾರು 10 ರಿಂದ 15 ಕಡೆ ಮದ್ಯದಂಗಡಿಗಳಿರಬಹುದು. ಅದರಲ್ಲಿ ಮದ್ಯ ಮಾರಾಟ ಮಾಡಬಹುದು. ಆದರೆ ಒಂದು ಚಿಕ್ಕ ಗ್ರಾಮವಾದ ಗೌನಳ್ಳಿಯಲ್ಲಿ ಸುಮಾರು 20 ಕ್ಕು ಅಧಿಕ ಕಡೆಗಳಲ್ಲಿ ಮದ್ಯ ಮಾರಟ ಯಾರ ಭಯವಿಲ್ಲದೆ ನಡೆಯುತ್ತಿದೆ. ಕಿರಣಿ ಅಂಗಡಿಗಲಲ್ಲಿ, ಹೋಟೆಲ್ ಸೇರಿದಂತೆ ಮನೆಗಲಲ್ಲು ಕೂಡ ಮಾರಾಟ ಮಾಡುತ್ತಾರೆ ಎಂದು ಹೆಳಲಾಗುತ್ತಿದೆ. ಆದಷ್ಟು ಬೇಗನೆ ಇದಕ್ಕೆ ಕಡಿವಾಣ ಹಾಕಬೇಕು.
ಮದ್ಯ ಮಾರಾಟದಿಂದ ಕುಡುಕರ ಸಂಖ್ಯೆ ಹೆಚ್ಚಿದ್ದು ರಸ್ಥೆಗಳಲ್ಲಿ ಮಹಿಳೆಯರು ಓಡಾಡಲು ಕಷ್ಟವಾಗಿದೆ. ಮದ್ಯದ ಅಮಲಿನಲ್ಲಿ ರಸ್ಥೆಯ ಮೇಲೆ ಯಾರು ಬರುತ್ತಿದ್ದಾರೆ ಎಂಬುವುದನ್ನು ನೋಡದೆ ಅವಾಚ್ಯಶಬ್ದಗಳನ್ನು ಬಳಿಸಿ ಮಾತನಾಡುವುದು, ಮಹಿಳೆಯರನ್ನು ಕಂಡ ಕೂಡಲೆ ಅವರನ್ನೆ ಕೆಟ್ಟದೃಷ್ಠಿಯಿಂದ ನೋಡುವುದು, ನೀರಿಗೆ ಹಾಗೂ ಇನಿತರ ಕೆಲಸಕ್ಕೆ ಹೋಗುವಾಗ ಅವರನ್ನ ಗುರಾಯಿಸುವುದು ನಡೆದಿದೆ. ಗೌನಳ್ಳಿ ಗ್ರಾಮದ ಮಹಿಳೆಯರಯ ಮತ್ತು ವಿದ್ಯಾವಂತ ಯುವಕರು ಬೇಸತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದೆವೆ. ಆದಷ್ಟು ಬೇಗನೆ ಈ ಮದ್ಯ ಮಾರಾಟವನ್ನು ನಿಲ್ಲಿಸಿ ಇಲ್ಲವಾದರೆ ಸಾಮುಹೀಕವಾಗಿ ನಮ್ಮೆಲರಿಗು ಒಂದಿಷ್ಟು ವಿಷವನ್ನು ನೀಡಿ ಎಂದು ಹೋರಾಟಗಾರ ರವಿಚಂದ್ರ ಗುತ್ತೆದಾರ ಅದೀಕಾರಿಗಳಿಗೆ ಎಚ್ಚರಿಸಿದರು.
ಗೌನಳ್ಳಿ ಗ್ರಾಮದ ಅನೇಕ ಜನರು ಈ ಪ್ರತಿಭಟನೆಯನ್ನು ನಡೆಸಿ ತಮ್ಮ ಗ್ರಾಮವನ್ನು ಉಳಿಸಿಕೊಡಿ ಎಂದು ತಾಲೂಕ ದಂಡಾಧೀಕಾರಗಿಳಿಗೆ ಮನವಿ ಸಲ್ಲಿಸಿದರು. ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.