ಸರಸ್ವತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಬೀದರ :ಸೆ.6:ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಸರಸ್ವತಿ ಶಿಶುಮಂದಿರ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಬೀದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯಅತಿಥಿಗಳಾದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕೋಶಾಧ್ಯಕ್ಷರಾದ ಶ್ರೀ ನಾಗೇಶ ರೆಡ್ಡಿ ಅವರು ಮಾತನಾಡುತ್ತಾ ಶಿಕ್ಷಕರ ದಿನಾಚರಣೆ ಏಕೆ ಆಚರಿಸುತ್ತಿದ್ದೇವೆ ಎಂದರೆ, ಸರ್ವಪಲ್ಲಿ ರಾಧಕೃಷ್ಣನವರು ಶಿಕ್ಷಕರು ಹೇಗೆ ಇರಬೇಕೆಂದು ನಡೆದು ತೋರಿಸಿದವರು. ಎತ್ತಿನ ಬಂಡಿಗೆ ಅಲಂಕರಿಸಿ ರಾಧಕೃಷ್ಣ ಅವರಿಗೆ ಒಳಗಡೆ ಕೂಡಿಸಿ ವಿದ್ಯಾರ್ಥಿಗಳೇ ಎತ್ತುಗಳಾಗಿ ಬಂಡಿ ಎಳೆದರು. ಕಾರಣ ಶೃದ್ಧೆಯಿಂದ, ಭಕ್ತಿಯಿಂದ ಮಾಡಿದ ಕೆಲಸದ ಗೌರವಕ್ಕೆ ಕಾರಣರಾದರು. ಮೊದಲು ಶಿಕ್ಷಕರಾದರು, ನಂತರ ವೀದೇಶಾಂಗ ಮಂತ್ರಿ, ಯುನಿರ್ವಸಿಟಿಯ ಕುಲಪತಿಗಳು, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದರು. ನೀವು ಯಾವ ವೃತ್ತಿಜೀವನದಲ್ಲಿ ಹೆಚ್ಚು ಸಂತೋಷದ ಕ್ಷಣಗಳು ಕಾಣಿದಿರಿ ಎಂದು ಕೇಳಿದಾಗ ಅವರು ಹೇಳಿದ್ದು ಶಿಕ್ಷಕ ವೃತ್ತಿಯಲ್ಲಿ ನಾನು ಸಂತೋಷದ ಕ್ಷಣಗಳು ಕಂಡಿದ್ದೆನೆ ಎಂದು ಹೇಳಿ. ನನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಿ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಹಾಗೂ ಸಂಸ್ಥೆಯ ಸದಸ್ಯರಾದ ಶ್ರೀ ಪೀರಪ್ಪಾ ಔರಾದೆ ಅವರು ಮಾತನಾಡುತ್ತಾ ಅತ್ಯಂತ ಐತಿಹಾಸಿಕ ಪರಂಪರೆಯನ್ನು ಹೊಂದಿದ ನಮ್ಮ ಭಾರತ ದೇಶ. ಶ್ರೀರಾಮನು, ಸ್ವಾಮಿ ವಿವೇಕಾನಂದರು ಇವರು ಕೂಡ ಗುರುವಿನ ಹತ್ತಿರ ಶಿಕ್ಷಣ ಪಡೆದರು. ಶಿಕ್ಷಕರ ವೃತ್ತಿ ದೇಶದ ಮೆದುಳು, ಶಿಕ್ಷಕರಿಲ್ಲದೆ ಯಾವುದೇ ನಾಡು ಉದ್ದಾರವಾಗಲು ಸಾಧ್ಯವಿಲ್ಲ. ಮಕ್ಕಳೇ ಹೂಗಳು, ಶಿಲ್ಪಿ ಕಲ್ಲಿಗೆ ಮೂರ್ತಿ ಮಾಡುವಂತೆ ಶಿಕ್ಷಕರು ಮಕ್ಕಳಿಗೆ ಮೇಧಾವಿಗಳಾಗುವಂತೆ ಮಾಡುವರು. ತಾಯಿ, ತಂದೆ ಮತ್ತು ಗುರುಗಳು ಇವರು ಮೂರು ಜನರು ಮಗುವಿನ ಬ್ರಹ್ಮರು ಇವರ ಮಾತುಗಳನ್ನು ಗಮನವಿಟ್ಟು ಕೇಳಿ ಜೀವನದಲ್ಲಿ ಅಳವಡಿಸಿ ಕೊಳ್ಳಿರಿ, ಶಿಕ್ಷಕ ವೃತ್ತಿ, ಶ್ರೇಷ್ಠ ವೃತ್ತಿಯಾಗಿದೆ. ಎಲ್ಲಾ ಶಿಕ್ಷಕರಿಗೆ, ಶಿಕ್ಷಕರ ದಿನಾಚರಣೆಯ ಶುಭಾಷಯಗಳು ಎಂದು ಹೇಳಿದರು.

ಈ ವೇದಿಕೆ ಮೇಲೆ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ಗುರುನಾಥ ಮೂಲಗೆ, ಹಾಗೂ ಮುಖ್ಯಗುರುಗಳಾದ ಶ್ರೀ ವಿಜಯಕುಮಾರ ಕರಂಜಿ ಅವರು ಉಪಸ್ಥಿತರಿದ್ದರು. ಕು. ಶ್ರೇಯಾ ಮತ್ತು ಸಿಂಚನಾ 2ನೇ ವರ್ಗ ಗುರುಭಕ್ತಿ ಗೀತೆ ಹಾಡಿದರು. ಅರ್ಪಿತಾ ಸಂಜುಕುಮಾರ 5ನೇ ವರ್ಗ ಸ್ವಾಗತಪರಿಚಯ ಮಾಡಿದರು. ಲಾವಣ್ಯ ಸುರೇಶ 5ನೇ ವರ್ಗ ವಂದಿಸಿದರು. ಆರಾಧ್ಯ ಶಾಂತಕುಮಾರ 5ನೇ ವರ್ಗ ಕಾರ್ಯಕ್ರಮವನ್ನು ನಿರೂಪಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.