ಸರಸ್ವತಿಯ ಪೂಜೆಯೊಂದಿಗೆ ಕಾಲೇಜು ಆರಂಭ

ಸಿಂದಗಿ:ಜ.1: ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸರ್ಕಾರದ ಆದೇಶದನ್ವಯ ಕಾಲೇಜು ತರಗತಿಗಳು ಸರಸ್ವತಿಯ ಪೂಜೆಯೊಂದಿಗೆ ಶುಕ್ರವಾರ ಪ್ರಾರಂಭಗೊಂಡವು.

      ಈ ಸಂಧರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಅವರು ಮಾತನಾಡಿ, ಕೊರೋನಾದಿಂದಾಗಿ ಶಾಲಾ ಕಾಲೇಜುಗಳು ಸ್ಥಗಿತಗೊಂಡಿದ್ದವು ಸರ್ಕಾರದ ಆದೇಶದ ಮತ್ತೇ ಯಥಾಸ್ಥಿತಿ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿವೆ. ಕೊರೋನಾದಿಂದ ಶಿಕ್ಷಣದ ವ್ಯವಸ್ಥೆ ಹಾಳಾಗಿತ್ತು ಅದಕ್ಕೆ  ನಾವೇಲ್ಲ ಒಂದು ಹೊಸಾ ಆಯಾಮ ನೀಡಿ ಮಕ್ಕಳ ಶಿಕ್ಷಣ ಮತ್ತು ಅವರ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕಿದೆ. ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯವಾಗಿರುವುದರಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳೊಮದಿಗೆ ಕಾರ್ಯ ನಿರ್ವಹಿಸಬೇಕು ಎಂದರು.

          ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಜರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸತೀಶ ಪಾಟೀಲ, ಬಿ.ಎಸ್.ಬಿರಾದಾರ, ಆರ್.ಬಿ.ಹೊಸಮನಿ, ಆರ್.ಸಿ.ಕಕ್ಕಳಮೇಲಿ, ಎಮ್.ಎಸ್,.ಕಿರಣಗಿ, ಎಮ್.ಎನ್.ಅಜ್ಜಪ್ಪ, ಶಾಂತೂ ಬಿರಾದಾರ, ಎಫ್.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಅರ್ಶಿಯಾ ಸಿಂದಗಿಕರ, ಸಿದ್ದಲಿಂಗ ಕಿಣಗಿ, ರವಿ ಉಪ್ಪಾರ, ಬಿ.ಜಿ.ಪಾಟೀಲ ಸೇರಿದಂತೆ ಇತರರು ಇದ್ದರು