ದಾವಣಗೆರೆ ಜೂ 25; ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಚೇತನ ಪೌಂಡೇಷನ್ ಮತ್ತು ಸಂಚಲನ ಸುದ್ದಿವಾಹಿನಿ ಇವರ ಸಹಯೋಗದಲ್ಲಿ ಜರುಗಿದ ನುಡಿ ಸಡಗರ ಕಾರ್ಯಕ್ರಮದಲ್ಲಿ ಸರಸ್ವತಿ ಕೆ ನಾಗರಾಜ್ ರವರಿಗೆ ನಾಡಿನ ಅನೇಕ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಗೌರವ ಪೂರ್ವಕವಾಗಿ ಕರುನಾಡ ಚೇತನ ರಾಜ್ಯಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.ಸರಸ್ವತಿ ಕೆ ನಾಗರಾಜ್ ಅವರು ಸಾಹಿತ್ಯ ಸೇವೆ ಕನ್ನಡಪರವಾದ ಮತ್ತು ಸಮಾಜಮುಖಿಯಾದ ಚಿಂತನೆಯನ್ನು ಹೊಂದಿ ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.ಈ ಸ್ತುತ್ಯಾರ್ಹವಾದ ಸೇವೆ ಹೀಗೆ ಸದಾ ಮುಂದುವರೆಯಲಿ ಮತ್ತು ಜಗದ್ವೀಖ್ಯಾತಿಗಳಿಸಲಿ ಎಂದು ಚೇತನ ಫೌಂಡೇಷನ್ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಾಗಿರಿರವರು ಪತ್ರಿಕೆ ಪ್ರಕಟಣೆಯಲ್ಲಿ ಸರಸ್ವತಿ ಕೆ ನಾಗರಾಜ್ ರವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.