ಸರಳ ಹನುಮ ಜಯಂತಿ: ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟ ಅರ್ಚಕರು

ಕಲಬುರಗಿ,ಏ.27- ಕೊರೊನಾ ಎರಡನೇ ಅಬ್ಬರದ ಅಲೆಯ ಹಿನ್ನಲೆಯಲ್ಲಿ ಹಾಗೂ ಸರ್ಕಾರದ ಕೋವಿಡ್ ನಿಯಮವಳಿ ಮತ್ತು ಆದೇಶದಂತೆ ಕಲಬುರಗಿಯಲ್ಲಿ ಈ ಬಾರಿ ಹನುಮ ಜಯಂತಿ ಉತ್ಸವವನ್ನು ಸಾಂಪ್ರದಾಯಿಕವಾಗಿ ಮತ್ತು ಅತಿ ಸರಳವಾಗಿ ಆಚರಿಸಲಾಯಿತು.
ನಗರದ ಜಗತ್ ಬಡಾವಣೆಯಲ್ಲಿರುವ ಹನುಮನ ಗುಡಿಯಲ್ಲಿ ಭಕ್ತರ ಗಲಿಬಿಲಿ ಇಲ್ಲದೇ ಕೋವಿಡ್ ನಿಯಮದಂತೆ ಕೇವಲ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ದೇವಸ್ಥಾನದ ಅರ್ಚಕರಾದ ನಾರಾಯಣಾಚಾರ್ಯ ಖುದ್ದು ಮಾಸ್ಕ್ ಧರಿಸಿಕೊಂಡು ಸರಳ ಪದ್ಧತಿಯಲ್ಲಿ ಹನುಮನ ತೊಟ್ಟಿಲೊತ್ಸವ ಕಾರ್ಯಕ್ರಮವನ್ನು ನಡೆಸಿದರು.
ಕೋವಿಡ್ ಹಿನ್ನಲೆಯಲ್ಲಿ ಎಲ್ಲ ಭಕ್ತರು ಈ ಬಾರಿ ತಮ್ಮ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಹನುಮನ ಸ್ಮರಣೆ ಮಾಡಿ ನಾಡಿನಲ್ಲಿ ಹಬ್ಬುತ್ತಿರುವ ಮಹಾಮಾರಿ ಕೊರೊನಾ ಸೋಂಕನ್ನು ತೊಲಗಿಸುವಂತೆ ರಾಮಭಕ್ತ ಹನುಮಾನ ದೇವರಲ್ಲಿ ಪ್ರಾರ್ಥಿಸಬೇಕೆಂದು ಅವರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.