ಸರಳ‌ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಸಾಧ್ಯ

ಸಂಜೆವಾಣಿ ವಾರ್ತೆ

ಚಿತ್ರದುರ್ಗ, ಜೂ.6; ಗಂಡ-ಹೆAಡತಿ ಚಿಕ್ಕಪುಟ್ಟ ವಿಷಯಗಳಿಗೆ ಜಗಳವಾಡಬಾರದು. ಅದು ಸಂಸಾರದ ಕಲಹಕ್ಕೆ ಹಾದಿ ಮಾಡಿಕೊಡುತ್ತದೆ. ಒಬ್ಬರಿಗೊಬ್ಬರು ಸರಿಯಾಗಿ ಅರ್ಥೈಸಿಕೊಂಡು ಬಾಳಬೇಕು. ವಿವಾಹವೆನ್ನುವುದು ಜೀವನದ ಅತಿಮುಖ್ಯ ಘಟ್ಟ. ಅನ್ಯೋನ್ಯತೆ ಇಲ್ಲಿ ಮುಖ್ಯ. ದುಶ್ಚಟಕ್ಕೆ ಬಲಿಯಾಗಬಾರದು. ನಮ್ಮಲ್ಲಿರುವ ದುರ್ಗುಣಗಳನ್ನು ಬಿಡಬೇಕು. ನಮ್ಮಲ್ಲಿರುವ ಗುಣಗಳನ್ನು ಗುರುತಿಸುವವರು ಇರುತ್ತಾರೆ. ನಮ್ಮಲ್ಲಿರುವ ಒಳ್ಳೆಯತನಗಳನ್ನು ಉಳಿಸಿಕೊಂಡು ಬೆಳೆಸಬೇಕು ಎಂದು ಡಾ. ಬಸವಕುಮಾರ ಸ್ವಾಮಿಗಳು ತಿಳಿಸಿದರು.ಶ್ರೀಮಠ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಒಂದು ವಾರಗಳ ಕಾಲ ಸಸಿಗಳನ್ನು ನೆಡಲಾಯಿತು.  ಅದರ ಸಮಾರೋಪ. ಕಳೆದ 20 ವರ್ಷಗಳ ಹಿಂದೆ ಇದೇದಿನ ಅಮಾವಾಸ್ಯೆ ದಿನ 101 ಜೋಡಿಗಳ ವಿವಾಹವಾಗಿರುವುದು ದಾಖಲೆ ಸರಿ. ಸಾಮೂಹಿಕ ಮದುವೆಯಲ್ಲಿ ಆದರ್ಶ ಇರುತ್ತದೆ. ಸಾಮೂಹಿಕ ಬದ್ಧತೆ, ನಾಯಕತ್ವದಲ್ಲಿ ಮೌಲ್ಯಗಳು ಇರುತ್ತವೆ. ಇದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು. ಸಾಲದ ಸುಳಿಯಿಂದ ಹೊರಬರಬೇಕೆಂದರೆ ಇಂತಹ ಆದರ್ಶ ಮದುವೆಗೆ ಒಳಗಾಗಬೇಕು. ಅನೇಕ ಶ್ರೀಮಂತರು ದುಬಾರಿ ಆಮಂತ್ರಣ ಪತ್ರಿಕೆ, ಇನ್ನಿತರೇ ಅದ್ಧೂರಿ ವಿವಾಹಗಳನ್ನು ಮಾಡುತ್ತಾರೆ. ಇದು ದುಂದುವೆಚ್ಚವೇ ಸರಿ. ಬಸವಾದಿ ಶರಣರ ತತ್ವಾದರ್ಶಗಳ ಮೇಲೆ ಶ್ರೀಮಠದಲ್ಲಿ ವಿವಾಹಗಳು ನೆರವೇರುತ್ತವೆ ಎಂದರು.