ಸರಳ ಸಹಸ್ತ್ರಾರ್ಜುನ ಮಹರಾಜರ ಜಯಂತಿ

ಗುರುಮಠಕಲ್ :ನ.22: ಯಾವುದೇ ಕಾರ್ಯಕ್ರಮ ಮಾಡಿದರೂ ಅದನ್ನು ಶಿಸ್ತಿನಿಂದ ಮತ್ತು ರಾಜವೈಭವದಿಂದ ಮಾಡುವುದು ನಮಗೆ ರೂಢಿಗತ. ನಡೆ-ನುಡಿಯಲ್ಲಿ, ರೀತಿ-ನೀತಿಯಲ್ಲೂ ನಮ್ಮ ಸಮಾಜದವರು ಒಂದು ಹೆಜ್ಜೆ ಮುಂದಿರುವುದು ಹೆಮ್ಮೆಯ ವಿಷಯ ಎಂದು ಸಮಾಜದ ಸಹ ಕಾರ್ಯದರ್ಶಿ ಹಣಮಂತರಾವ ಗೊಂಗ್ಲೆ ಹೇಳಿದರು.

ಪಟ್ಟಣದ ಕ್ಷತ್ರೀಯ ಸಮಾಜದವರಿಂದ ಅಂಕಮ್ಮ ದೇವಸ್ಥಾನದಲ್ಲಿ ಸಹಸ್ತ್ರಾರ್ಜುನ ಮಹರಾಜರ ಜಯಂತಿ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಈ ಹಿಂದೆ ವ್ಯಾಪಾರವನ್ನೇ ನಂಬಿ ಬದುಕು ನಡೆಸುತ್ತಿದ್ದ ನಮ್ಮ ಸಮಾಜದವರು ಈಗ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿಭಾವಂತರಾಗಿ ಮೆರೆಯುತ್ತಿದ್ದಾರೆ. ಇದೇ ರೀತಿ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರೆ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬಹುದು. ವಿದ್ಯಾವಂತರಾದವರು ಸಮಾಜದ ಉದ್ಧಾರಕ್ಕೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.
ಕೊರೋನಾ ಸೊಂಕಿನ ಹಿನ್ನಲೆಯಲ್ಲಿ ನಮ್ಮ ಕ್ಷತ್ರೀಯ ಸಮಾಜವತಿಯಿಂದ ಮಹರಾಜರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಸಮಾಜದ ಅಧ್ಯಕ್ಷ ಜನಾರ್ಧನ ಬುಡ್ಡಪ್ಪ, ಕಾರ್ಯದರ್ಶಿ ಚಂದುಲಾಲ್ ಚೌದ್ರಿ, ಡಾ. ವಿನಾಯಕರಾವ್, ಡಾ.ಸುನೀಲ್ ಕುಮಾರ್, ತುಲಸಿರಾಮ, ಅಂಬದಾಸ್ ಜಿತ್ರೆ, ಚಂದ್ರಕಾಂತ ಚೌದ್ರಿ, ತುಕರಾಮ್ ದಢಂಗೆ, ಬಾಲಜಿ, ಜಗದೀಶ ಮೆಂಜಿ, ನರೇಶ ಗೊಂಗ್ಲೆ, ಲಕ್ಷ್ಮಣರಾವ್, ರುಪೇಶ ಬಸುದೆ ಸೇರಿದಂತೆ ಇತರರು ಇದ್ದರು.