ಸರಳ ಸಜ್ಜನಿಕೆ ವ್ಯಕ್ತಿ ನಾಡಗೌಡರಿಗೆ ಸಚಿವ ಸ್ಥಾನ ನೀಡಲಿ:ಯಾಳಗಿ

ತಾಳಿಕೊಟೆ:ಮೇ.17: 6 ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಸರಳ ಸಜ್ಜನಿಕೆ ವ್ಯಕ್ತಿಯಾಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಸಚೀವ ಸ್ಥಾನ ನೀಡಬೇಕೆಂದು ಜಿಲ್ಲೆಯ ಕಾಂಗ್ರೇಸ್ ಪಕ್ಷದ ವತಿಯಿಂದ ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸುತ್ತೇವೆಂದು ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಅವರು ಹೇಳಿದರು.
ಮಂಗಳವಾರರಂದು ಪಟ್ಟಣದ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸಿ.ಎಸ್.ನಾಡಗೌಡರು ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಕರೆದುಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದಾರೆ ಈ ಹಿಂದೆ ಶಾಸಕರಿದ್ದಾಗಲೂ ಕೂಡಾ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ದಿ ಮಾಡಿದ್ದರೂ ಕೂಡಾ ಅವರು ಎಂದು ಹೇಳಿಕೊಂಡು ತಿರುಗಾಡಿದಂತಹ ವ್ಯಕ್ತಿಯಲ್ಲಾ ಅವರು ಸದಾ ಅಭಿವೃದ್ದಿ ಪರ ಚಿಂತನೆ ಯುಳ್ಳವ್ಯಕ್ತಿಯಾಗಿದ್ದಾರೆ ಅವರು ಮಂತ್ರಿ ಪಧವಿಗಾಗಿ ಎಂದು ಲಾಬಿ ಮಾಡಿಲ್ಲಾ ಸುಮಾರು 25 ವರ್ಷದ ಆಡಳಿತದಲ್ಲಿ ಕಾಂಗ್ರೇಸ್ ಪಕ್ಷದ ಸಂಘಟನೆಯನ್ನು ಮತ್ತು ಸುಭದ್ರ ಆಡಳಿತವನ್ನು ನೀಡುತ್ತಾ ಬಂದಿದ್ದಾರೆ ಅವರಿಗೆ ಈ ಭಾರಿಯ ಸಚಿವ ಸಂಪುಟದಲ್ಲಿ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತೇವೆಂದರು.
ಇನ್ನೋರ್ವ ಕಾಂಗ್ರೇಸ್ ಯುವ ಘಟಕದ ಮಾಜಿ ಅಧ್ಯಕ್ಷ ವಿಜಯಸಿಂಗ್ ಹಜೇರಿ ಹಾಗೂ ಮುಖಂಡ ಪ್ರಭುಗೌಡ ಮದರಕಲ್ಲ ಅವರು ಮಾತನಾಡಿ 6ನೇ ಭಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸಿ.ಎಸ್.ನಾಡಗೌಡರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ ಅವರಿಗೆ ಈ ಹಿಂದೆ 2013ರಲ್ಲಿ ದೇಹಲಿ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಲಾಗಿತ್ತು ಆದರೆ ಈ ಭಾರಿ ಸಚಿವ ಸ್ಥಾನದ ಎಲ್ಲ ಅರ್ಹತೆ ಹೊಂದಿರುವ ನಾಡಗೌಡ ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚೀವ ಸ್ಥಾನ ಕೊಡಬೇಕು ಇಲ್ಲದಿದ್ದರೆ ಕಾಂಗ್ರೇಸ್ ಕಾರ್ಯಕರ್ತರು ಹೋರಾಟಕ್ಕೆ ಇಲಿಯುತ್ತೇವೆ ಎಂಬ ಸಂದೇಶವನ್ನು ಕಾಂಗ್ರೇಸ್ ನಾಯಕರಾದ ಸಿದ್ದರಾಮಯ್ಯನವರಿಗೆ, ಡಿ.ಕೆ.ಶಿವಕುಮಾರ ಅವರು ನೀಡುತ್ತಿದ್ದೇವೆ ಈ ಕುರಿತು ಕಾಂಗ್ರೇಸ್ ಮುಖಂಡರ ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ನಿಯೋಗದೊಂದಿಗೆ ಹೈಕಮಾಂಡಿಗೆ ಒತ್ತಾಯಿಸಲಿದ್ದೇವೆಂದರು.
ಕಾಂಗ್ರೇಸ್ ಮುಖಂಡರಾದ ಪ್ರಭುಗೌಡ ಮದರಕಲ್ಲ, ಎ.ಟಿ.ಪಾಟೀಲ ಅವರು ಮಾತನಾಡಿದರು.
ಈ ಸಮಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ಚೊರಗಸ್ತಿ, ಮುಖಂಡರುಗಳಾದ ಎಂ.ಜಿ.ಪಾಟೀಲ, ವೀರುಪಾಕ್ಷಯ್ಯ ಹಿರೇಮಠ(ಹಂಪಿಮುತ್ಯಾ), ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಎಚ್.ಎಸ್.ಪಾಟೀಲ, ಚಿಂತಪ್ಪಗೌಡ ಯಾಳಗಿ, ಎಸ್.ಎಂ.ಇಬ್ರಾಹಿಂಪೂರ, ಸಿದ್ದನಗೌಡ ಪಾಟೀಲ, ಪರಶುರಾಮ ತಂಗಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಬಿ.ಎನ್.ಹಿಪ್ಪರಗಿ, ರವಿ ಪಾಟೀಲ, ಎಚ್.ಎಸ್.ಗೂಗಲ್ಲ, ಶಶಿ ಕೇಸರಭಾವಿ, ಮುಸ್ತಫಾ ಚೌ