ಸರಳ ಸಜ್ಜನಿಕೆಯ ಗುಣಗಳು ಉತ್ತಮ ಸಾಧನೆಗೆ ನೆರವಾಗುತ್ತದೆ:ದಾಸನಕೇರಿ

ಸೈದಾಪುರ:ಮೇ.2:ಸರಳ ಸಜ್ಜನಿಕೆಯ ಗುಣಗಳು ಉತ್ತಮ ಸಾಧನೆಗೆ ನೆರವಾಗುತ್ತದೆ. ಮಹಾದೇವಪ್ಪ ದದ್ದಲ ಅವರಲ್ಲಿನ ಈ ಮೌಲ್ಯಗಳೇ ರೈತ ಪರ ಕೆಲಸ ಮಾಡಲು ಉತ್ತಮ ಅವಕಾಶ ಅವರಿಗೆ ದೊರೆತಿದೆ ಎಂದು ಮಲ್ಲಣ್ಣ ದಾಸನಕೇರಿ ಹೇಳಿದರು.

ಸೈದಾಪುರ ಸಮೀಪದ ಕಡೇಚೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ಧೇಶಕರಾಗಿ ಅವಿರೋಧ ಆಯ್ಕೆಯಾದ ಮಹಾದೇವಪ್ಪ ದದ್ದಲ ಅವರನ್ನು ಯಾದಗಿರಿ ನಗರದ ಆತ್ಮೀಯರ ಬಳಗದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ಎಲ್ಲ ವಯಸ್ಸಿನ ಸಮಾಜಭಾಂದವರೊಂದಿಗೆ ಉತ್ತಮ ಸಂಬಂದ ಹೊಂದಿರುವ ದದ್ದಲ ಅವರು ಹಿರಿಯರ, ಗ್ರಾಮಸ್ಥರ ಸಲಹೆ ಸಹಕಾರದೊಂದಿಗೆ ಉತ್ತಮ ಕಾರ್ಯ ನಿರ್ವಹಿಸುವಂತಾಗಲಿ ಎಂದು ಹಾರೈಸಿದರು.

ಡಾ.ಭೀಮರಾಯ ಲಿಂಗೇರಿ ಮಾತನಾಡಿ, ಸರಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುವುದರ ಮೂಲಕ ಜನಪರವಾದ ಸೇವೆ ಮಾಡುವ ಪ್ರಯತ್ನ ನಿಮ್ಮದಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೋಪಾಲ ದಾಸನಕೇರಿ, ನಗರಸಭಾ ಸದಸ್ಯ ಸ್ವಾಮಿದೇವ, ಯಾಮರೆಡ್ಡಿ ಮುಂಡಾಸ ದುಪ್ಪಲ್ಲಿ, ಭೀಮರಾಯ ಕಿಲ್ಲನಕೇರಾ, ಸಾಯಿಬಪ್ಪ ಕಡೇಚುರು, ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ, ಶರಣಪ್ಪ ಮುಷ್ಟುರು, ಶಿಕ್ಷಕರಾದ ಸೀಮನ, ಪರುಶುರಾಮ, ಮೂರ್ತಪ್ಪ ವಡನಳ್ಳಿ, ಅಯ್ಯಪ್ಪ ಗೌಡಗೇರಾ, ಪರುಶುರಾಮ, ತಿಪ್ಪಯ್ಯ ಟೇಲರ, ಶಾಂತಪ್ಪ ಕಾನ್ನಳ್ಳಿ ಸೇರಿದಂತೆ ಇತರರಿದ್ದರು.


ಅವಿರೋಧ ಆಯ್ಕೆ ನನ್ನ ಜವಬ್ದಾರಿ ಹೆಚ್ಚಾಗುವಂತೆ ಮಾಡಿದೆ. ರೈತ ಪರವಾದ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ತಲುಪುವಂತೆ ಮಾಡುವಲ್ಲಿ ಪ್ರಯತ್ನ ಮಾಡುತ್ತೇನೆ. ಅನ್ನದಾತರ ಸೇವೆ ಮಾಡುವ ಅವಕಾಶ ದೊರೆತಿರುವುದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತೇನೆ.

           ಮಹಾದೇವಪ್ಪ ದದ್ದಲ ನೂತನ ನಿರ್ಧೇಶಕ ಪ್ರಾ.ಕೃ.ಪ.ಸ.ಸಂ.ನಿಯಮಿತ ಕಡೇಚೂರು