ಸರಳ ವಿವಾಹ ಆಚರಣೆಗೆ ಸಲಹೆ

ಮೈಸೂರು:ಮಾ:21: ಪ್ರತಿಷ್ಠೆಗಾಗಿ ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಆಚರಿಸುವ ಬದಲು ಸರಳ ರೀತಿಯಲ್ಲಿ ಆಚರಿಸಿಕೊಳ್ಳುವಂತೆ ಟಿ. ನರಸೀಪುರ ತಾಲ್ಲೂಕು ಮುದುಕನಪುರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ ಪೋಷಕರಿಗೆ ಸಲಹೆ ನೀಡಿದರು.
ಇಂದು ಬೆಳಿಗ್ಗೆ ನಗರದ ಲಕ್ಷ್ಮೀ ಚಿತ್ರಮಂದಿರದ ರಸ್ತೆಯಲ್ಲಿರುವ ರೇಣುಕಾ ಮಂದಿರದಲ್ಲಿ ರಾಷ್ಟ್ರೀಯ ಬಸವದಳ ವತಿಯಿಂದ ಮಾತೆ ಮಹಾದೇವಿಯವರ 75ನೇ ಜಯಂತಿ ಹಿನ್ನಲೆ ಆಯೋಜಿಸಿದ್ದ “ಮಹಾದೇವ-ಭವಾನಿ” ಇವರುಗಳ ಸರಳ ವಿವಾಹವನ್ನು ನೆರವೇರಿಸಿ ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಈ ನೂತನ ವಧು-ವರ ತೀರಾ ಕಡು ಬಡ ವರ್ಗದ ಕುಟುಂಬದವರಾಗಿದ್ದು, ಪರಸ್ಪರ ಒಪ್ಪಿ ತಂದೆ ತಾಯಿಯ ಸಮ್ಮುಖದಲ್ಲಿ ಮದುವೆಯಾಗುತ್ತಿರುವುದು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಇವರ ನವ ಜೀವನ ಹಾಲು ಜೇನಿನಂತಿರಲಿ ಎಂದು ಶುಭ ಹಾರೈಸಿದರು.