ಸರಳ ರೀತಿಯ ಆಚರಣೆಯ ದೀಪಾವಳಿ

ಸಂಡೂರು :ನ:18 ಪ್ರತಿವರ್ಷವು ಸಂಭ್ರಮದ ಸಡಗರದಲ್ಲಿ ಮನೆಯ ಕುಟುಂಬದವರು, ಬಂಧುಗಳು ಸಾರ್ವಜನಿಕರ ಸಾರಥ್ಯದಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಿದ್ದು, ಈ ವರ್ಷ ಮಹಾಮಾರಿ ಕರೋನ ಕೊವಿಡ್-19 ರೋಗಕ್ಕೆ ಹೆದರಿ ವ್ಯಾಪಾರಸ್ಥರು, ಸಾರ್ವಜನಿಕರು ಮನೆ ಮನೆಳಲ್ಲಿ ಸರಳ ರೀತಿಯಲ್ಲಿ ಸಾಂಕೇತಿಕವಾಗಿ ಹಬ್ಬವನ್ನು ಆಚರಿಸಿದರು. ಇಲ್ಲಿ ಪ್ರಮುಖ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರತಿವರ್ಷವೂ ಪಟಾಕಿ ಲಕ್ಷ್ಮೀಬಾಣ ಹೀಗೆ ಹಲವಾರು ಬಾಣಗಳ ಅಬ್ಬರದ ಆರ್ಭಟ ಎದ್ದುಕಾಣುತ್ತಿತ್ತು. ಆದರೆ, ಸರ್ಕಾರದ ಆದೇಶದಂತೆ ಆರ್ಭಟ ಕಂಡು ಬರಲಿಲ್ಲ. ನೆಪ ಮಾತ್ರಕ್ಕೆ ಪೂಜಾ ಸಂದರ್ಭದಲ್ಲಿ ಸಾಯಂಕಾಲ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಲ್ಲಲ್ಲಿ ಪಟಾಕಿ ಸದ್ದುಗಳು ಕಂಡುಬಂದವು. ಅದರಲ್ಲೂ ವಿಶೇಷವಾಗಿ ಎಲ್.ಬಿ. ಕಾಲೋನಿಯಲ್ಲಿ ಪಟಾಕಿಗಳ ಅಬ್ಬರ 10.00 ಗಂಟೆಯ ವರೆಗೆ ನಡೆಯಿತು. ಬಾಣ, ಹೂವು, ಹಣ್ಣು, ಸರಕುಗಳ ದರಗಳು ಹೆಚ್ಚಿದರೂ, ಸಂಪ್ರದಾಯವನ್ನು ಬಿಡದೇ ಸರಳ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುದುದು ಗಮನಾರ್ಹವಾಗಿದೆ. ಜೂಜಾಟದ ಪ್ರಕ್ರಿಯೆ ಸಹಾ ಎಲ್ಲೂ ಕಂಡು ಬಂದಿಲ್ಲ. ಪೋಲಿಸರ ಬೆಂಗಾವಲೇ ಇದಕ್ಕೆ ಪ್ರಮುಖ ಕಾರಣ.