ಸರಳ ರೀತಿಯಲ್ಲಿ ನಡೆದ ಬಾವಗಿ ಭದ್ರೇಶ್ವರ ಸ್ವಾಮಿ ಜಾತ್ರೆ

ಬೀದರ:ಮೇ.1: ತಾಲುಕಿನ ಬಾವಗಿ ಭದ್ರೇಶ್ವರ ಜಾತ್ರೆಯು ಕೋವಿಡ್ 19 ನ ಪರಿಣಾಮ ಸರಳವಾಗಿ ಜರುಗಿತು ಅಲ್ಪಸಂಖ್ಯೆ ಭಕ್ತರಿಂದ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು.

ಪ್ರತಿ ವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದ್ದ ಭದ್ರೇಶ್ವರ ಸ್ವಾಮಿ ಜಾತ್ರೆ ಈ ವರ್ಷ ಕಡಿಮೆ ಪ್ರಮಾಣದ ಭಕ್ತರಿಂದ ನಡೆದಿದೆ. ಕೋವಿಡ್ ಕಾರಣದಿಂದ ಜಾತ್ರೆಗೆ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ನಿಬರ್ಂಧ ಹೇರಿದ್ದು ಸಾಂಪ್ರದಾಯಿಕವಾಗಿ ಹಾಗೂ ಸರಳವಾಗಿ ಜಾತ್ರೆ ನಡೆಯಿತು. ಅದರಂತೆ, ನಿನ್ನೆÀ 11:00 ಗಂಟೆಗೆ ಜಾತ್ರೆಗೆ ಮೂರು ದಿನಗಳ ಕಾಲ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಮೂಲಕ ಜಾತ್ರೆ ಮುಕ್ತಾಯಗೊಂಡಿತ್ತು

ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ದೇವಸ್ಥಾನ ಈ ಬಾರಿ ಭಕ್ತರಿಲ್ಲದೇ ತನ್ನ ವೈಭವ ಕಳೆದುಕೊಂಡಿದೆ. ದೇವಾಲಯದ ಆಡಳಿತ ಸಿಬ್ಬಂದಿ, ಆರ್ಚಕರು ಬಿಟ್ಟು ಹೊರಗಿನವರು ಬೇರೆ ಯಾರೂ ಜಾತ್ರೆಯಲ್ಲಿ ಪಾಲ್ಗೊಂಡಿಲ್ಲ. ದೇವಾಲಯದ ಆವರಣ ಬೀಕೋ ಎನ್ನುತ್ತಿತ್ತು

ಮಠದ ಶಿವಕುಮಾರ ಸ್ವಾಮಿ, ಭದ್ರಯ್ಯ ಸ್ವಾಮಿ ಶುಕ್ರವಾರ ರಾತ್ರಿ 10:35ಕ್ಕೆ ರಥ ಉತ್ಸವಕ್ಕೆ ಪೂಜೆ ಸಲ್ಲಿಸಿ ಕರ್ಪೂರದ ಆರತಿ ಬೆಳಗುವ ಮಾಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು.

ರೇವಣಪ್ಪ ಭದ್ರಣ್ಣ, ರಾಜಕುಮಾರ್ ಪಾಟೀಲ್, ಜಗನ್ನಾಥ್ ಚಿದ್ರಿ, ಶಿವಕುಮಾರ್ ಪಾಟೀಲ್, ಅನಿಲ್ ಹಜರಗಿ, ರಾಜಕುಮಾರ್ ಭದ್ರಣ್ಣ ಶಿವುಕುಮಾರ ಭದ್ರಪ್ಪ ಹಾಗೂ ಮಂದಿರದ ಅರ್ಚಕರು ಇದ್ದರು.