ಸರಳ ರೀತಿಯಲ್ಲಿ ಜಯಂತಿ ಆಚರಣೆ

ಜೇವರ್ಗಿ :ಏ.16: ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ 130 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ನಗರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ 130 ನೇ ಜಯಂತಿಯನ್ನು ಬಾಬಾಸಾಹೇಬ್ ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮುಖಾಂತರ ಅವರಿಗೆ ನಮನ ಸಲ್ಲಿಸಿ ಹಾಗೂ ಪಂಚ ಶೀಲವನ್ನು ಹೇಳುವುದರ ಮುಖಾಂತರ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಂದೇವಾಲ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಬಾಯಿ ಮರೆಪ್ಪ ಬಡಿಗೇರ್, ಸ.ಪ್ರ.ದ. ಕಾಲೇಜು ಜೇವರ್ಗಿ ಪ್ರಾಂಶುಪಾಲರಾದ ಬಸವರಾಜ ಕೊಂಬಿನ್, ಜಿ.ಪಂ. ಮಾಜಿ ಸದಸ್ಯ ಮರೆಪ್ಪ ಬಡಿಗೇರ, ಭೀಮರಾಯ ನಗನೂರ, ವಿನೋದ್ ಹತ್ತಿಗುಡೂರ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಸಿದ್ದಪ್ಪ ಆಲೂರ್, ಮಲ್ಲಿಕಾರ್ಜುನ್ ಕಟ್ಟಿ, ರಾಜಶೇಖರ್ ಶಿಲ್ಪಿ, ಶ್ರೀಮಂತ ಧನಕರ್, ಮಲ್ಲಿಕಾರ್ಜುನ್ ದಂಡಗುಲಕರ್, ಮಿಲಿಂದ್ ಸಾಗರ್, ಮೌನೇಶ್ ಹಂಗರಗಿ, ದೇವು ಬಡಿಗೇರ್, ವಿಶ್ವ ಆಲೂರ್ zp, ಸಚಿನ್ ಹರವಾಳ, ಆಕಾಶ್ ಡೋಗನ್ ಕರ್, ಹೇಮಂತ್ ಬೆಂಗಳೂರು, ಮಲ್ಲಿಕಾರ್ಜುನ್ ಕಲಬುರ್ಗಿ, ಜೈಭೀಮ್ ಸಿಂಗೆ, ಆಕಾಶ್ ಸಾಥಖೆಡ, ಶರಣು ಬಡಿಗೇರ ಇತರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.