
ಬೀದರ್:ಎ.7: ಜೀವನದಲ್ಲಿ ಆಸ್ತಿ, ಅಂತಸ್ತಿನ ದರ್ಪ ಬಿಟ್ಟುಪ್ರತಿಯೊಬ್ಬರ ಸರಳ ಜೀವನ ಸಾಗಿಸಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಚಿಂಚೋಳಿ ತಾಲ್ಲೂಕಿನ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಭಾಲ್ಕಿ ತಾಲ್ಲೂಕಿನ ತಳವಾಡ (ಕೆ) ಗ್ರಾಮದಲ್ಲಿ ನಡೆದ ಮಹಾದೇವ ದೇವಾಲಯದ 22ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಪೀಳಿಗೆ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ತಂದೆ ತಾಯಿ ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ನುಡಿದರು.
ತಂದೆ ತಾಯಿ ವೃದ್ಧಾಪ್ಯದಲ್ಲಿಇದ್ದಾಗ ಅವರ ಸೇವೆ ಮಾಡಬೇಕು. ಯಾವ ಕಾರಣಕ್ಕೂ ಅವರ ಮನಸ್ಸು ನೋಯಿಸಬಾರದು ಎಂದು ತಿಳಿಸಿದರು.
ಗ್ರಾಮಗಳಲ್ಲಿ ತಾವೆಲ್ಲ ಸೌಹಾರ್ದದಿಂದ ಬಾಳಬೇಕು. ಪರಿಸ್ಪರರ ಕಷ್ಟ- ಸುಖದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಬಸವಣ್ಣ ಅಕ್ಕಮಹಾದೇವಿ ಸೇರಿದಂತೆ ಮಹಾತ್ಮರ ಜೀನವ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ಅಕ್ಕಮಹಾದೇವಿ ತಾಯಿ ನಮ್ಮಲ್ಲರಿಗೂ ಆದರ್ಶಗಳು ಎಲ್ಲಾ ಮಹಿಳಿಯರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾದೇವ ಭಕ್ತರ ಪಾಲಿನ ಆರಾಧ್ಯ ದೈವ ಭಕ್ತರ ಸಂಕಷ್ಟ ಪರಿಹರಿಸುತ್ತಾನೆ ಎಂದು ಹೇಳಿದರು ಇದಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆಯಿಂದ ಮಹಾದೇವ ಮಂದಿರದವರೆಗೆ ಡಾ. ಬಸವಲಿಂಗ ಅವಧೂತರನ್ನು ಬೆಳ್ಳಿ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಕಳಸ ಹೊತ್ತ ಮಹಿಳೆಯರು, ಕೋಲಾಟ, ಡೋಳು ಕುಣಿತ, ಯುವಕರ ನರ್ತನ ಮೆರವಣಿಗೆಗೆ ಕಳೆ ತಂದುಕೊಟ್ಟವು.
ಪ್ರಮುಖರಾದ ಯುವರಾಜ ರಾಜಪೂರೆ, ಓಂಕಾರ ಬೋರಗೆ, ಶಿವಕುಮಾರ ಪಾಟೀಲ್, ಬಾಬಶೆಟ್ಟಿ ರಾಜಪೂರೆ, ಜಗನ್ನಾಥ ಕನಶಟ್ಟೆ, ಕಾಮಶೆಟ್ಟಿ ರಾಜಪೂರೆ ಜಗನ್ನಾಥ ಪಾಟೀಲ್ ವಿಶ್ವನಾಥ ಹೂಗಾರ ಮತ್ತಿತರರು ಪಾಲ್ಗೊಂಡಿದ್ದರು.