
ಕಾಳಗಿ. ಏ.3 : ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೇಶಾದ್ಯಂತ ಕೊರೋನಾ 2ನೇ ಅಲೆ ಸದ್ದಿಲ್ಲದೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಡಾ. ಬಿ. ಆರ್. ಅಂಬೇಡ್ಕರ ಹಾಗೂ ಜಗಜೀವನರಾವ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ಸಿಪಿಐ ವಿನಾಯಕ ಚೌವ್ಹಾಣ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಎಸ್ಐ ದಿವ್ಯಾ ಮಹಾದೇವ, ಮುಖಂಡರಾದ ಸಂತೋಷ ನರನಾಳ, ರೇವಣಸಿದ್ಧ ಕಟ್ಟಿಮನಿ, ಸೂರ್ಯಕಾಂತ ಕಟ್ಟಿಮನಿ, ಸುಂದರ ಸಾಗರ, ಪರಮೇಶ್ವರ ಕಟ್ಟಿಮನಿ, ಬಾಬು ಡೊಣ್ಣೂರ, ಭೀಮರಾವ ರಾಠೋಡ ಅನೇಕರಿದ್ದರು.