ಸರಳ ಅರ್ಥಪೂರ್ಣಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ

ಮಾಲೂರು, ಏ.೩- ಕೊರೋನಾಎರಡನೇ ಅಲೆ ಪ್ರಾರಂಭವಾಗಿರುವುದರಿಂದ ಈ ಬಾರಿಯಡಾ.ಬಿ.ಆರ್.ಅಂಬೇಡ್ಕರ್‌ಜಯಂತಿ ಹಾಗೂ ಜಗಜೀವನರಾಮಜಯಂತಿಯನ್ನು ಸರಳವಾಗಿ ಆಚರಿಸಬೇಕಾಗಿ ಬಂದಿದ್ದು,ಸಂಘ-ಸಂಸ್ಥೆಗಳ ಸಹಕಾರ ನೀಡಬೇಕೆಂದು ತಹಸೀಲ್ದಾರ್ ಮಂಜುನಾಥ್ ಮನವಿ ಮಾಡಿದರು.
ಇಲ್ಲಿನ ಮಿನಿವಿಧಾನ ಸೌಧದಲ್ಲಿ ನಡೆದಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನರಾಮ್‌ಜಯಂತಿಆಚರಣೆಯ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡುತ್ತಅಂಬೇಡ್ಕರ್‌ಜಯಂತಿಯನ್ನು ಸರಳವಾಗಿ ಆಚರಿಸಬೇಕೆಂಬ ಆದೇಶಇದ್ದರೂಅದನ್ನುಅರ್ಥಪೂರ್ಣವಾಗಿಆಚರಿಸಲು ಶಾಸಕರಅಧ್ಯಕ್ಷತೆಯಲ್ಲಿಇನ್ನೊಂದು ಪೂರ್ವಭಾವಿ ಸಭೆಎರ್ಪಡಿಸಲಾಗುವುದುಎಂದರು.
ಇದೇ ಸಂದರ್ಭದಲ್ಲಿ ಪೂರ್ವಭಾವಿ ಸಭೆಗೆ ವಿವಿಧಇಲಾಖೆಯ ಪ್ರಮುಖರುಗೈರುಆಗಿರುವ ಬಗ್ಗೆ ಅಕ್ಷೇಪ ವ್ಯಕ್ತ ಪಡಿಸಿದ ದಲಿತ ಸಂಘಟನೆಗಳ ಮುಖಂಡರುಗಳನ್ನು ಸಮಾಧಾನ ಪಡಿಸಿದ ತಹಸೀಲ್ದಾರ್ ಅವರುಅಂಬೇಡ್ಕರ್‌ರಸ್ತೆ ಎಂಬ ನಾಮಕರಣ, ಸಮುದಾಯ ದುರಸ್ಥಿ ಗೆ ದಲಿತ ಸಂಘಟನೆಯ ಮುಖಂಡರುಗಳ ಬೇಡಿಕೆ ಬಗ್ಗೆ ಇಲಾಖೆ ಅಧಿಕಾರಿಗಳೂಡನೆ ಚರ್ಚಿಸಿ ಶೀಘ್ರವಾಗಿ ಕಾರ್‍ಯಗತವಾಗಿ ಮಾಡಲಾಗುವುದುಎಂದರು. ಈ ಬಗ್ಗೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್ ಅವರಿಗೆ ನಿದೇರ್ಶನ ನೀಡಲಾಗಿದೆಎಂದರು.
ದಲಿತ ಸಂಘಟನೆಯ ಮುಖಂಡರು ಗಳಾದ ಎಸ್.ಎಂ.ವೆಂಕಟೇಶ್, ಕೋಡೂರು ಗೋಪಾಲ್, ತಿ.ಶ್ರೀನಿವಾಸ್, ದೂ.ನಾರಾಯಣಪ್ಪ, ಗೋವಿಂದಸ್ವಾಮಿ, ಸಂತೋಷ್. ನಾರಾಯಣಸ್ವಾಮಿ, ಚವ್ವೇನಹಳ್ಳಿ ವಿಜಿ,ಸಮಾಜಕಲ್ಯಾಣ ಇಲಾಖಾಧಿಕಾರಿಶಿವಕುಮಾರ್,ತಾ.ಪಂ.ವ್ಯವಸ್ಥಾಪಕಿ ಭಾನು, ತೋಟಗಾರಿಕಾಧಿಕಾರಿ ಶಿಲ್ಪಾಶ್ರೀ, ಎ.ಎಸ್.ಐ.ಸೋಮಶೇಖರ್,ಎ.ಪಿ.ಎಂ.ಸಿ.ಕಾರ್‍ಯದರ್ಶಿ ಶಿಲ್ಪಾ ಇದ್ದರು.