ಸರಳಾದೇವಿ ಕಾಲೇಜ್ ಹಳೆ ವಿದ್ಯಾರ್ಥಿಗಳ ಸಂಘಕ್ಕೆ
ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆ ಆಯ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.03: ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್, ಸ್ವಯತ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆ ಆಯ್ಕೆಯಾಗಿದ್ದಾರೆ.
ನಿನ್ನೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀದೇವಿ ಅವರ ನೇತೃತ್ವದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಸಭೆ ನಡೆಯಿತು.
ಈ ಹಿಂದೆ ಇದ್ದ ಸಂಘದ ಪದಾಧಿಕಾರಿಗಳನ್ನು ಸಮಾಪನಗೊಳಿಸಿ ನೂತನವಾಗಿ ಆಯ್ಕೆ ಮಾಡುವ ಕಾರ್ಯ ನಡೆಯಿತು. ಸಂಘದ ಗೌರವ ಅಧ್ಯಕ್ಷರಾಗಿ ಪ್ರಾಂಶುಪಾಲರಿರುತ್ತಾರೆ. ಬರುವ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆ, ಉಪಾಧ್ಯಕ್ಷರಾಗಿ ಶೋಭಾ ಕಾಳಿಂಗ, ಎಂ.ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ವೈ.ಹನುಮಂತರೆಡ್ಡಿ, ಸಹ ಕಾರ್ಯದರ್ಶಿಗಳಾಗಿ ವೈ.ಅರುಣಾಚಲಂ, ಜಿ.ಆನಂದ ಕುಮಾರ್, ಖಜಾಂಚಿಯಾಗಿ ಎನ್.ವೀರಭದ್ರಗೌಡ, ಸಹ ಖಜಾಂಚಿಯಾಗಿ ರಫಿಕ್, ಸಂಘಟನಾ ಕಾರ್ಯದರ್ಶಿಗಳಾಗಿ ದೇವರಾಜ್, ಶಿವಕುಮಾರ್ ಸ್ವಾಮಿ, ಕೆ.ಎಂ.ಮಂಜುನಾಥ, ಕೆ.ಪ್ರಭಾಕರ ಜೋಯಿಸ್, ಗಂಗಾಧರ, ಸಂಚಾಲಕರಾಗಿ ಗುರುಬಸಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನಕರ್, ಚಾನಾಳ್ ಶೇಖರ್, ಕನಕಪ್ಪ, ಶಿವಕುಮಾರ್, ಪ್ರದೀಪ್ ಕುಮಾರ್, ಕೇಶವ್, ಡಿ.ಸುಧಾಕರ್, ಹನುಮೇಶ್, ರುದ್ರಮುನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಂತರ ಸಭೆ ನಡೆಸಿ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಿ ಕಾಲೇಜಿನಲ್ಲಿ ಒಂದು ಕೊಠಡಿ ಪಡೆಯಲು ಪ್ರಾಂಶುಪಾಲರು ಸಮ್ಮತಿಸಿದರು.

Attachments area