ಸರಳಾದೇವಿ ಕಾಲೇಜು ಆಡಿಟೋರಿಯಂಗೆ ಭೂಮಿಪೂಜೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.28:  ನಗರದ  ಸರಳಾದೇವಿ ಸತೀಶ್ಚಂದ್ರ ಆಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಡಿಟೋರಿಯಂ ಕಟ್ಟಡದ ಕಾಮಗಾರಿಗೆ  ನಗರ ಶಾಶಕ ಜಿ. ಸೋಮಶೇಖರ ರೆಡ್ಡಿ ನಿನ್ನೆಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ರೆಡ್ಡಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಇದ್ದರು.
ಶಾಸಕರು ಮಾತನಾಡಿ, ಕಾಲೇಜಿಗೆ ಅವಶ್ಯವಾದ ಕೊಠಡಿಗಳ, ಗ್ರಂಥಾಲಯ, ಪ್ರಯೋಗಾಲಯ ನಿರ್ಮಾಣ ಆಗಿವೆ, ಆಡಿಟೋರಿಯಂನ ಅವಶ್ಯಕತೆ ಇತ್ತು ಆ ಬೇಡಿಕೆ ಸಹ ಇಂದು ಈಡೇರುತ್ತಿದೆ. ರಾಜ್ಯದ ಉತ್ತಮ ಕಾಲೇಜಾಗಿ ಇದು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.