ಸರಳಾದೇವಿ ಕಾಲೇಜಿನ 1ನೇ ಸೆಮಿಸ್ಟರ್ ಮರು ಮೌಲ್ಯಮಾಪನದ ಫಲಿತಾಂಶ ಬಿಡುಗಡೆಯಾಗುವರೆಗೂ 3ನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲು ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25: ನಗರದ ಪ್ರತಿಷ್ಠಿತ ಸರಳಾದೇವಿ ಕಾಲೇಜು (ಸ್ವಾಯತ್ತ), ಎನ್‍ಇಪಿಯ ಪದವಿ ಮೊದಲನೇ ಸೆಮಿಸ್ಟರ್ ಫಲಿತಾಂಶವು ಹತ್ತು ತಿಂಗಳ ನಂತರ ತುಂಬಾ ತಡವಾಗಿ ಬಂದಿದ್ದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟದಲ್ಲಿ ಸಿಲುಕಿದಂತಾಗಿದೆ. ಪ್ರಸ್ತುತ ಸೆಮಿಸ್ಟರ್ ಮೂರನೇ ಸೆಮಿಸ್ಟರ್ ಪರೀಕ್ಷೆಯು ಇದೆ ಏಪ್ರೀಲ್ 1ರಿಂದ ನಡೆಸಲು ಸುತ್ತೋಲೆ ಬಂದಿದೆ. ಈಗ ಸಾಕಷ್ಟು ವಿದ್ಯಾರ್ಥಿಗಳಿಗೆ ಒಂದನೇ ಸೆಮಿಸ್ಟರ್ ವಿಷಯಗಳ ಉತ್ತಿರ್ಣರಾಗುತ್ತೇವೆ ಎಂಬ ನಂಬಿಕೆ,   ಆದರೆ ಮರು ಮೌಲ್ಯಮಾಪನಕ್ಕೆ ಸಮಯ ಅವಕಾಶ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ವಿಷಯಗಳ ಮರು ಮೌಲ್ಯಮಾಪನ ಮಾಡಿದ ನಂತರ ಫಲಿತಾಂಶ ಬಿಡುಗಡೆಯಾಗುವರೆಗೂ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಬೇಕೆಂದು ಎಐಡಿಎಸ್‍ಓ ಕಾಲೇಜಿನ ಪ್ರಾಂಶುಪಾಲರಲ್ಲಿ ಮನವಿ ಮಾಡಿದೆ ಎಂದು ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ ತಿಳಿಸಿದರು.
ಮನವಿ ಸ್ವೀಕರಿಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರಾದ ಎಮ್.ಶಾಂತಿ, ನಿಹಾರಿಕ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.