ಸರಳಾದೇವಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ. ಮೇ 17: ನಗರದ ಸರಳಾದೇವಿ  ಸತೀಶ್ಚಂದ್ರ ಅಗರವಾಲ್  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಲವು ಸಾಧನೆ ಮಾಡಿದ್ದಾರೆ.
ಸಿದ್ಧರಾಮೇಶ್ವರ  ಎಂಬ ವಿದ್ಯಾರ್ಥಿ  ಶಿವಮೊಗ್ಗ ರಂಗಾಯಣ ವು ಚಿಣ್ಣರಿಗಾಗಿ ಇತ್ತೀಚೆಗೆ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ತರಬೇತಿದಾರರಾಗಿ ಪಾಲ್ಗೊಂಡು ಮಕ್ಕಳಿಗೆ ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ ,ಹುಲಿ ಕುಣಿತ ಕುರಿತಂತೆ ವಿವಿದ ತರಬೇತಿ ನೀಡಿದ್ದಾರೆ.
ಇನ್ನು ಜೆ. ವಿನಯ ಪ್ರಸಾದ್ ಬಳ್ಳಾರಿಯ ಮಹಾದೇವ ಎಜುಕೇಶನ್ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್  ಆಯೋಜಿಸಿದ್ದ ‘ ಬಾರಿಸು ಕನ್ನಡ ಡಿಂಡಿಮವ ‘ ಕಾರ್ಯಕ್ರಮದಲ್ಲಿ ಗಾಯನವನ್ನು ಪ್ರಸ್ತುತಪಡಿಸಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ನಾಟಕ ವಿಭಾಗದ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಸಿಬ್ಬಂದಿ ಶ್ಲಾಘಿಸಿದ್ದಾರೆ.