
(ಸಂಜೆವಾಣಿ ಪ್ರತಿನಿಧಿಯಿಂದ
ಬಳ್ಳಾರಿ, ಆ.15: ನಗರ ಶಾಸಕ ನಾರಾ ಭರತ್ ರೆಡ್ಡಿ ಸರಳಾದೇವಿ ಸತೀಶ್ಚಂದ್ರ ಅಗರ್ ವಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಕೆ ಮಂಜುನಾಥ್ ರೆಡ್ಡಿ ವಹಿಸಿದ್ದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ ಮಾತನಾಡಿದರು.
ದೇಶ ಭಕ್ತಿ ಗೀತೆಗಳನ್ನು ಬಿ.ಎ ವಿದ್ಯಾರ್ಥಿ ಡಿ. ಎಸ್ ಗಣೇಶ್ ಮತ್ತು ನಾಟಕ ವಿಭಾಗದ ವಿದ್ಯಾರ್ಥಿಗಳು ಹಾಡಿದರು. ನಿರೂಪಣೆ ಮತ್ತು ಸ್ವಾಗತವನ್ನು ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ರಾಮಾಂಜಿನಯ್ಯ ಅವರು ನೆರವೇರಿಸಿದರು.
ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ ಮತ್ತು ರೇಂಜರ್, ರೆಡ್ ಕ್ರಾಸ್, ನಾಟಕ ವಿಭಾಗ, ಸಾಂಸ್ಕೃತಿಕ ಸಮಿತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.