ಸರಳವಾಗಿ 65ನೇ ಕನ್ನಡ ರಾಜೋತ್ಸವಆಚರಣೆ

ಅರಕೇರಾ.ನ.೧-ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ೬೫ ನೇ ಕನ್ನಡ ರಾಜೋತ್ಸವವನ್ನು ಸರಳವಾಗಿ ಆಚರಿಸಲಾಯಿತು.ಕರ್ನಾಟಕ ರಕ್ಷಣೆ ವೇದಿಕೆಯವತಿಯಿಂದ ನಾಡದೇವಿ ಭುವನೇಶ್ವರಿ ಮಾತೆಗೆ ಶ್ರೀ ಹಂಪಯ್ಯಸ್ವಾಮಿ ಮಠಪತಿಯವರು ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು ಭಾಗ್ಯವಂತಿ ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀದೇವಿ ರಾಜಶೇಖರನಾಯಕರವರು ದ್ವಜಾರೋಹಣಮಾಡಿದರು.
ಸಂದರ್ಭದಲ್ಲಿ ಮಾತನಾಡಿದ ಅವರು ನವೆಂಬರ್ ೧ ಕನ್ನಡ ರಾಜ್ಯೋತ್ಸವ ನಮ್ಮ ರಾಜ್ಯದೆಲ್ಲೆಡೆ ಕನ್ನಡ ದಿನವನ್ನಾಗಿ ಆಚರಿಸುತ್ತೇವೆ.ನಮ್ಮ ನಾಡು ಕನ್ನಡ ನಾಡು ಕರ್ನಾಟPವು ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಪ್ರಕೃತಿ ಸೌಂದರ್ಯ ವನ್ಯಜೀವಿಗಳ ಸಮೃದ್ದಿಗೆ ವಿಶ್ವಪರಂಪರೆಗೆ ಪ್ರಸಿದ್ದಿ ಪಡೆದ ನಾಡು ನಮ್ಮದಾಗಿದೆ ಎಂದರು.
ಕನ್ನಡ ರಾಜ್ಯೋತ್ಸವನ್ನು ಸರಳವಾಗಿ ಆಚರಣೆಮಾಡಿದರು ಸಹ ನಮ್ಮಲ್ಲಿರುವ ಕನ್ನಡ ಭಾಷೆ, ಅಭಿಮಾನ ಶ್ರೀಮಂತವಾಗಿದ್ದು ನಾವೆಲ್ಲರೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವ ಮತ್ತು ಕನ್ನಡ ಭಾವುಟ ಕನ್ನಡದ ಭಾವುಟವೂ ಹಳದಿಮತ್ತು ಕೆಂಪು ಬಣ್ಣದಿಂದಕೂಡಿದೆ ಹಳದಿಬಣ್ಣವು ಶಾಂತಿ ಸೌಹಾರ್ದತೆಯನ್ನುತೊರಿಸುತ್ತದೆ ಕೆಂಪುಬಣ್ಣ ಕ್ರಾಂತಿಯ ಸಂದೇಶವನ್ನು ನೀಡುತ್ತದೆ ಕನ್ನಡಿಗರು ಶಾಂತಿಗೂ ಬದ್ದ ಯುದ್ದಕ್ಕೂ ಸಿದ್ದ ಎಂದರು.
ಸಂದರ್ಭದಲ್ಲಿ ಹನುಮಂತ್ರಾಯನಾಯಕ ಆಕಳಕುಂಪಿ ಮಲ್ಲಿಕಾರ್ಜುನಹೋಒಬಳಿ ಘಟಕದ ಅಧ್ಯಕ್ಷರು,ರಂಗಪ್ಪಗಾಲಿ ತಾಲೂಕ ಯುವ ಘಟಕ ಅಧ್ಯಕ್ಷರು,ಸಾಬಣ್ಣ ಖಾನಾಪೂರು ಗ್ರಾಮ ಘಟಕ ಅಧ್ಯಕ್ಷರು,ಕೆಂಚಣ್ಣ, ಬಸವರಾಜ ಪೂಜಾರಿ ಶರಣಬಸವಬೇರಿ,ಆಂಜನೇಯ್ಯಖಾನಾಪೂರು,ಸಾಬಣ್ಣಮದರಕಲ್,ಹನುಮಂತ್ರಾಯ,ಗೋವಿಂದ,ಸುರೇಶಬೋವಿ, ಬಸವಪೂಜಾರಿಆಂಜನೇಯ್ಯ,ಶಿವರಾಜಗುಜಪು,ಸಾಬಯ್ಯಕರ್ನಾಳ,ಮುದುಕಪ್ಪಕಬ್ಬೇರ,ಸುರೇಶಗೌಡ,ಸಮೀರ್,ಬಸವಕುಂಬಾರ, ರಮೇಶಉಪ್ಪಾರ, ವಿರೇಶಭೇರಿ, ಆಲೇಶ, ರಮೇಶನೆಕ್ಕೆ,ಯಲ್ಲಪ್ಪಬೇರಿ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮದಲ್ಲಿನ ನಾಡಕಾರ್ಯಲಯ ಗ್ರಾಮ ಪಂಚಾಯತ ಕಾರ್ಯಲಯ, ಸಿದ್ದಯ್ಯ ಹವಲ್ದಾರ ಸರಕಾರಿ ಪ್ರೌಢಶಾಲೆ ,ಆದರ್ಶವಿದ್ಯಾಲಯ, ಸರಕಾರಿ ಬಾಲಕಿಯರ ಪ್ರೌಢಶಾಲೆ ಸರಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘ ಸಂಸ್ಥೆಯಲ್ಲಿ ಸರಳವಾಗಿ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು.