ಸರಳವಾಗಿ ಹೋಳಿ ಹಬ್ಬ ಆಚರಣೆ

ಬೀದರ:ಮಾ.30:ನಗರದ ತಾಯಿ ಮಗುವಿನ ವೃತ್ತದ ಬಳಿಯಿರುವ ಐ ಕೇರ್ ಇಮೆಜಿಂಗ್ ಮತ್ತು ಡೈಗ್ನೋಷ್ಠಿಕ್ ಸೆಂಟರ್ ನಲ್ಲಿ ಸರಳವಾಗಿ ಮತ್ತು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋಳಿಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಐ ಕೇರ್ ಸೆಂಟರ್ ನ ವ್ಯವಸ್ಥಾಪಕರಾದ ಶ್ರೀ ನಜೀಬ ಉಲ್ಲಾಹುಸೇನಿ ಮಾತನಾಡಿ ಹೋಳಿ ಹಬ್ಬ ಮನುಷ್ಯನಲ್ಲಿರುವ ಕಾಮ ಕ್ರೋಧ ಲೋಭ ಮೋಹ ಷಡ್ವೈರಿ ಗಳನ್ನು ಸುಟ್ಟು ಹಾಕಿ

ಪ್ರೀತಿ ಪ್ರೇಮದಿಂದ ಬದುಕುವ ಮಾನವಿಯ ಮೌಲ್ಯವನ್ನು ಎತ್ತಿ ಸೌಹಾರ್ದತೆಯಿಂದ ಬದುಕಲು ಪ್ರೇರಣೆ ನೀಡುವ ಹಬ್ಬವಾಗಿದೆ. ಭಾರತದಲ್ಲಿ ಆಚರಣೆ ಮಾಡುವ ಎಲ್ಲಾ ಸಮುದಾಯದವರ ಹಬ್ಬಗಳು ಮಹತ್ವ ಪೂರ್ಣ ವಾಗಿರುವುದರಿಂದ ಎಲ್ಲರೂ ಕೂಡಿ ಆಚರಣೆ ಮಾಡುವುದು ಭಾರತಿಯ ಸಂಪ್ರದಾಯ, ವಿವಿಧತೆಯಲ್ಲಿ ಏಕತೆ ಮೂಡಿಸಿ ಸಂಬಂಧಗಳನ್ನು ಗಟ್ಟಿ ಗೊಳಿಸುತ್ತದೆ ಎಂದು ನುಡಿದರು.

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡುತ್ತ ಎಲ್ಲಡೆ ಕೋವಿಡ್ ಪ್ರಕರಣ ದಿನೇ ದಿನೇ ಹೆಚ್ಚುತ್ತಲಿರುವುದರಿಂದ ಗುಂಪು ಕಟ್ಟಿಕೊಂಡು ಹೋಳಿ ಆಚರಣೆ ಮಾಡುವುದಾಗಲಿ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಾಗಲಿ ಮಾಡಬಾರದು, ಮತ್ತು ಸಾಮಾಜಿಕ ಅಂತರ, ಮಾಸ್ಕ ಬಳಕೆ ಸ್ಯಾನಿಟೈಜರ್ ಸಾಬೂನು ಪದೇ ಪದೆ ಬಳಸಬೇಕು, ಕೋವಿಡ್ ತಡೆಯಲು ಪ್ರತಿ ಯೊಬ್ಬರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಶ್ರಿಮತಿ ಬಾಲಿಕಾ ಮುದ್ದಾ ಐ ಕೇರ್ ಸೆಂಟರ್ ಸಿಬ್ಬಂದಿ ವರ್ಗದವರಿಗೆ ಮಾಸ್ಕ ಮತ್ತು ಸ್ಯಾನಿಟೈಜರ್ ನೀಡಿ ವಾಡಿಕೆಯಂತೆ ರಂಗು ಹಚ್ಚಲು ಸೂಚಿಸಿದರು.

ಸಿಬ್ಬಂದಿಗಳಾದ ಪ್ರವೀಣ ಕುಮಾರ, ಜಯಶ್ರೀ, ಶ್ರೀದೇವಿ,ಸಂತೋಷ ಡೋಕೆ , ಪುಷ್ಪಾ, ಶ್ರವಂತಿ, ಉಪಸ್ತಿತರಿದ್ದರು.