ಸರಳವಾಗಿ ಹನುಮ ಜಯಂತಿ ಆಚರಣೆ

ಕಾಳಗಿ. ಏ.28 : ಪಟ್ಟಣದ ಪ್ರಸಿದ್ಧ ಹನುಮಾನ ಮಂದಿರದಲ್ಲಿ ಮಂಗಳವಾರ ಕೋವಿಡ್ ಎರಡನೆಯ ಅಲೆಯ ಆತಂಕದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹಿಂದೂ ಜಾಗೃತಿ ಸೇನೆಯಿಂದ ಹನುಮಾನ ಜಯಂತಿಯನ್ನು ಆಚರಿಸಿದರು.
ಬೆಳಿಗ್ಗೆ ಹನುಮಾನ ದೇವರ ಸನ್ನಿದಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿ. ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಮಾಡಿದರು.
ಸಂಪ್ರದಾಯದಂತೆ ತೊಟ್ಟಿಲೋತ್ಸವ ಜರಗಿತು.
ಹಿಂದೂ ಜಾಗೃತಿ ಸೇನೆಯ ಗೌರವಾಧ್ಯಕ್ಷ ಅಮೃತರಾವ ಪಾಟೀಲ, ನಗರಾಧ್ಯಕ್ಷ ಸುನೀಲ ರಾಜಪೂರ, ಹಿಂದೂ ಜಾಗೃತಿ ಸೇನೆಯ ತಾಲೂಕ ಉಪಾಧ್ಯಕ್ಷರಾದ ಬಲರಾಮ ವಲ್ಲ್ಯಾಪುರೆ, ರಾಹುಲ ಚಿತ್ತಾಪುರ, ಕಾಶಿನಾಥ ರಾಜಪೂರ, ಅಜಿತ ಹಡಪದ, ಸಂಜು ಸೂರ್ಯವಂಶಿ ಸೇರಿದಂತೆ ಅನೇಕರಿದ್ದರು.