ಸರಳವಾಗಿ ಶ್ರೀ ಭಗೀರಥ ಜಯಂತಿ ಆಚರಣೆ

ಮಂಡ್ಯ.ಏ.28:- ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಶ್ರೀ ಭಗೀರಥರವರ ಭಾವಚಿತ್ರಕ್ಕೆ ಪುಪ್ಪರ್ಚನೆ ಮಾಡಿ ಮಾತನಾಡಿದರು.
ಎಲ್ಲಾ ಸಮುದಾಯಗಳ ಮಹಾಪುರುಷರನ್ನು ನೆನೆಯುತ್ತಾ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಿ, ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಾ ಬಂದಿದೆ ಎಂದರು.
ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬೇಕಾದರೆ ಎಲ್ಲಾ ಸಮುದಾಯಗಳ ಮಹಾಪುರುಷರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಭಗೀರಥ ಮಹರ್ಷಿಗಳು ಕಪಿಲ ಮಹರ್ಷಿಗಳಿಂದ ಮುಕ್ತಿ ಪಡೆಯುವದಕ್ಕಾಗಿ ಹಾಗೂ ಇವರ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾದಾಗ ಸಮಸ್ಯೆ ಪರಿಹರಿಸುವುದಕ್ಕಾಗಿ ತಪಸ್ಸು ಕೈಗೊಂಡರು ಎಂದರು.
ಸತತವಾಗಿ ಹಲವಾರು ವರ್ಷಗಳ ಕಾಲ ಪ್ರಯತ್ನ ಮಾಡಿ ಸಾಧಸಿದರೆ ಅದನ್ನ ಭಗೀರಥ ಪ್ರಯತ್ನ ಎನ್ನುತ್ತಾರೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾತನಾಡಿ ಭಗೀರಥ ಮಹರ್ಷಿಗಳು ಇಕ್ಷ್ವಾಕು ರಾಜವಂಶದ ರಾಜಕುಮಾರನಾದ ನಂತರ, ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದು, ತನ್ನ ಪೂರ್ವಜರಿಗೆ ಸದ್ಗತಿ ಪ್ರಾಪ್ತಿಯಾಗಲಿಲ್ಲವೆಂಬ ವಿ?Áದದಿಂದ ತನ್ನ ಮಂತ್ರಿಗೆ ತನ್ನ ರಾಜ ಕರ್ತವ್ಯಗಳನ್ನು ವಹಿಸಿ ಹಿಮಾಲಯದಲ್ಲಿ ತಪಸ್ಸಿಗೆ ಹೋದರು ಎಂದರು.
ಭಗೀರಥ ಮಹರ್ಷಿಗಳು ಶಿವನನ್ನು ಕುರಿತು ತೀವ್ರ ತಪಸ್ಸು ಮಾಡಿದರು ಮತ್ತು ಗಂಗೆಯನ್ನು ಭೂಮಿಗೆ ಇಳಿಸುವಂತೆ ಕೇಳಿದರು. ಶಿವನು ಅವನಿಗೆ ವರವನ್ನು ನೀಡಿದನು, ಇದು ಅಂತಿಮವಾಗಿ ಗಂಗಾ ದೇವಿಯು ಗಂಗಾನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು ಎಂದು ಕಥಾ ಪ್ರಸಂಗವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಜವರೇಗೌಡ, ಉಪ್ಪಾರ ಸಮುದಾಯದ ಮುಖಂಡರಾದ ನಾಗರತ್ನ, ಸಿದ್ದರಾಜು, ಜಯಶಂಕರ್ ಮೂರ್ತಿ, ಹೇಮಮೂರ್ತಿ ಉಪಸ್ಥಿತರಿದ್ದರು