ಸರಳವಾಗಿ ವಿಶ್ವ ಮಾನವ ಕುವೆಂಪು ಜಯಂತಿ ಆಚರಣೆ

ಸುರಪುರ:ಡಿ.30: ನಗರದ ತಹಸೀಲ್ ಕಚೇರಿಯಲ್ಲಿ ಬುಧವಾರ ವಿಶ್ವ ಮಾನವ ಕುವೆಂಪು ಅವರ 116ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರರಾದ ಸುಬ್ಬಣ್ಣ ಜಮಖಂಡಿ ಮಾತನಾಡಿ,ಭಾರತದ ಸಾಹಿತ್ಯದಲ್ಲಿನ ಅನಘ್ರ್ಯ ರತ್ನವೆಂದರೆ ರಾಷ್ಟ್ರಕವಿ ಕುವೆಂಪು ಅವರಾಗಿದ್ದಾರೆ.ಅವರು ಬರೆದ ಶ್ರೀ ರಾಮಾಯಣ ದರ್ಶನಂ ಕೃತಿಯು ಇಡೀ ಜಗತ್ತಿನ ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದಿದೆ.ಅಲ್ಲದೆ ಅದೇ ಕೃತಿಗೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಲಭಿಸಿದೆ.ಅಂತಹ ಮೇರು ಸಾಹಿತಿಯ ಜಯಂತಿಯನ್ನು ನಾಡಿನೆಲ್ಲೆಡೆ ತುಂಬಾ ಅದ್ಧೂರಿಯಾಗಿ ಆಚರಣೆ ಮಾಡಬೇಕಿತ್ತು,ಆದರೆ ಕೋವಿಡ್ ನಿಯಮಗಳಿಂದಾಗಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ-2 ತಹಸೀಲ್ದಾರರಾದ ಸೋಫಿಯಾ ಸುಲ್ತಾನ,ಸಿರಸ್ತೆದಾರರಾದ ಕೊಂಡಲ ನಾಯಕ,ಪ್ರಥಮ ದರ್ಜೆ ಸಹಾಯಕರಾದ ಶಂಕರಾನಂದ,ಚನ್ನಬಸವ,ಶಿವುಕುಮಾರ, ದ್ವೀತಿಯ ದರ್ಜೆ ಸಹಾಯಕರಾದ ಮಂಜುನಾಥ,ಕಾರ್ತಿಕ್,ಶ್ರೀನಿವಾಸ ಕುಲಕಿರ್ಣಿ,ರವಿ ನಾಯಕ,ರಾಧಾಬಾಯಿ,ಶ್ವೇತಾ ಹಾಗು ಶಿವಮ್ಮ ಸೇರಿದಂತೆ ಅನೇಕರಿದ್ದರು.