ಸರಳವಾಗಿ ದೇವರದಾಸಿಮಯ್ಯ ಜನ್ಮದಿನಾಚರಣೆ ಆಚರಣೆ

ಸಿರವಾರ.ಏ೧೭ – ತಾಲೂಕು ನೇಕಾರ ಒಕ್ಕೂಟದ ವತಿಯಿಂದ ದೇವರದಾಸಿಮಯ್ಯ ರವರ ಜನ್ಮ ದಿನಾಚರಣೆಯನ್ನು ಪಟ್ಟಣದ ತೇಜಸ್ ಮಹಲ್‌ನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮಿ ಉಮಾಪತಿ ಸಾಹಕಾರ್ ಚುಕ್ಕಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು. ಡಾ.ಸುನೀಲ್ ಸರೋದೆ ದೇವರದಾಸಿಮಯ್ಯ ಕುರಿತು ಮಾತನಾಡಿದರು. ಸಮಾಜದ ಮುಖಂಡರಾದ ಈರಣ್ಣ ಗಾಳಿ, ಡಾ.ನಾರಾಯಣ ಕೊಂಗಾರಿ, ಷಣ್ಮುಖಪ್ಪ ಮಸ್ಕಿ, ಡಾ.ಅಶ್ವಥನಾರಾಯಣ, ಶಿವಕುಮಾರ ಗುಡ್ಡದಮನಿ, ರಾಚಪ್ಪ ಬೋನಗಿರಿ, ರವಿಕುಮಾರ ಕೋಟಾ, ಶಂಕರ ಜೇಗರಕಲ್, ರಾಜೇಶ ಗುಡ್ಡದಮನಿ, ಉಮೇಶ ಜೇಗರಕಲ್, ಸಚಿನ್ ಚ್ಯಾಗಿ, ವೀರೇಶ ನೇಕಾರ, ಚನ್ನಬಸವ ಗುಡ್ಡದಮನಿ, ಕೃಷ್ಣಾ ಪರಂಗಿ, ಗಿರೀಶ್ ಬಂಡರಗಲ್ ಸೇರಿದಂತೆ ಇತರರು ಇದ್ದರು.