ಸರಳವಾಗಿ ಡಾ.ಬಾಬು ಜಗಜೀವನರಾಮ ಹಾಗೂಡಾ. ಬಿ.ಆರ್. ಅಂಬೇಡ್ಕರರವರ ಜಯಂತಿ ಆಚರಣೆ

ಕಲಬುರಗಿ,ಏ.01:ಕರ್ನಾಟಕ ವಿಧಾನಸಭೆಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇದೇ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನ್‍ರಾಮ್‍ರವರ 116ನೇ ಜನ್ಮದಿನಾಚರಣೆ ಹಾಗೂ ಏಪ್ರಿಲ್ 14 ರಂದು ಡಾ. ಬಿ.ಆರ್.ಅಂಬೇಡ್ಕರ್ ರವರ 132ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ಮೇಲ್ಕಂಡ ಮಹನೀಯರ ಜನ್ಮ ದಿನಾಚರಣೆ ದಿನದಂದು ವಿವಿಧ ಇಲಾಖೆಯವರು ತಮ್ಮ ತಮ್ಮ ಕಚೇರಿಗಳಲ್ಲಿ ಸರಳವಾಗಿ ನೀತಿ ಸಂಹಿತೆಗೆ ಅನುಗುಣವಾಗಿ ಆಚರಿಸಬೇಕು. ಮಹನಿಯರ ಪುತ್ಥಳಿ ಹತ್ತಿರದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದರೊಂದಿಗೆ ಸರಳವಾಗಿ ಜನ್ಮ ದಿನಾಚರಣೆಯನ್ನು ಆಚರಿಸಬೇಕೆಂದು ಅವರು ತಿಳಿಸಿದ್ದಾರೆ.