ಸರಳವಾಗಿ ಡಾ.ಅಂಬೇಡ್ಕರ ಜಯಂತಿ ಆಚರಣೆ

ಬಸವನಬಾಗೇವಾಡಿ:ಎ.15: ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಪಟ್ಟಣದ ತಹಶೀಲ್ದಾರ ಕಚೀರಿ ಕಾರ್ಯಾಲಯದಲ್ಲಿ ಶುಕ್ರವಾರ ತಾಲುಕಾಡಳಿತದಿಂದ ಸಂವಿದಾನ ಶಿಲ್ಪಿ ಡಾ, ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಂಬೇಡ್ಕರ ಜಯಂತಿಯನ್ನ ಸರಳವಾಗಿ ಆಚರಸಲಾಯಿತು.

ಈ ಸಂಧರ್ಭದಲ್ಲಿ ತಹಶೀಲ್ದಾರ ದುಂಡಪ್ಪ ಕೋಮಾರ, ಸಮಾಜ ಕಲ್ಯಾಣ ಇಲಾಖೆಯ ಭವಾನಿ ಪಾಟೀಲ ತಾಪಂ ಇಒ ಭಾರತಿ ಚಲುವಯ್ಯಾ, ಪುರಸಭೆ ಮುಖ್ಯಧಿಕಾರಿ ಶಿವಾನಂದ ಹಿರೇಮಠ, ಡಿವೈಎಸ್‍ಪಿ ಕರುಣಾಕರಶೆಟ್ಟಿ, ಲೋಕೊಪಯೋಗಿ ಇಲಾಖೆಯ ಜಿ,ಬಿ ಕಿರಸೂರ, ಕೃಷಿ ಇಲಾಖೆಯ ಎಂ,ಎಚ್, ಯರ್ಜರಿ, ಸಿಡಿಪಿಒ ನಿರ್ಮಲಾ ಸುರಪುರ, ಹೆಸ್ಕಾಂ ಎಇ ವಿಜಯಕುಮಾರ ಬಿರಾದಾರ, ಉಪನೊಂದಣಾ ಅದಿಕರಿ ದೇವಯ್ಯಾ, ಪಿಐ ಈರಯ್ಯಾ ಮಠಪತಿ, ಸಿ,ಜಿ, ಬಿರಾದಾರ, ದಲಿತ ಮುಖಂಡರಾದ, ಅರವಿಂದ ಸಾಲವಾಡಗಿ, ಪರಶುರಾಮ ದಿಂಡವಾರ, ಗುರುರಾಜ ಗುಡಿಮನಿ, ಕಾಮೇಶ ಬಜಂತ್ರಿ, ರಮೇಶ ಮ್ಯಾಗೇರಿ, ಶೇಖರ ಕಾಣೆ, ಶಿವಾನಂದ ಮೂರಮಾನ, ಶ್ರೀಶೈಲ ಹೆಬ್ಬಾಳ, ಸೇರಿದಂತೆ ಮುಂತಾದವರು ಇದ್ದರು.

ವಿವಿಧ ಸಂಘಟನೆಯಿಂದ ಅಂಬೇಡ್ಕರ ಜಯಂತಿ ಆಚರಣೆ: ಪಟ್ಟಣದ ಅಂಬೇಡ್ಕರ ನಗರದಲ್ಲಿ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರೀಯ ಬಸವ ಸ್ಯನ್ಯದಿಂದ ಹಾಗೂ ಅಂಬೇಡ್ಕರ ವೃತ್ತದಲ್ಲಿ ಭೀಮ ಆರ್ಮಿ ಭಾರತ ಏಕತಾ ಮಷಿನ್ ಸಂಘಟನೆಯಿಂದ ಡಾ, ಬಾಬಾಸಾಹೇಬ ಅಂಬೇಡ್ಕರ ಅವರ ಜಯಂತಿಯನ್ನ ಆಚರಿಸಲಾಯಿತು,

ಈ ಸಂಧರ್ಬದಲ್ಲಿ ಬಸವಸೈನ್ಯ ಸಂಸ್ಥಾಪ ಅಧ್ಯಕ್ಷ ಶಂಕರಗೌಡ ಬಿರಾದಾರ, ಪರಶುರಾಮ ಬೆಕಿನಾಳ, ಭೀಮರಾವ ನಡಗೇರಿ, ಮುತ್ತು ಬಜಂತ್ರಿ, ಮಹೇಶ ಸಾಲವಾಡಗಿ, ಯಮನಪ್ಪಾ ಮಡಿಕೆಶ್ವರ, ಪುಂಡ್ಲಿಕ್ ಬ್ಯಾಳಿ, ಪರಶುರಾಮ ಮ್ಯಾಗೇರಿ, ರವಿ ರಾಠೋಡ, ಸುನೀಲಗೌಡ ಚಿಕ್ಕೊಂ, ಶಿವನಂದ ಮಂಗಾನ್ನವರ, ಮಹಾಂತೇಶ ಸಾಸಾಬಾಳ, ಸಂತೋಷ ಪಿರಂಗಿ ಸೇರಿದಂತೆ ಮುಂತಾದವರು ಇದ್ದರು.