ಸರಳವಾಗಿ ಟಿಪ್ಪು ಜಯಂತಿ ಆಚರಣೆ

ಸಿರವಾರ.ನ.೧೦- ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಸಂಘದ ವತಿಯಿಂದ ಸರಳವಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು.
ಈ ವರ್ಷ ಬರಗಾಲ ಆವರಿಸಿದ್ದು, ರೈತರು ಮಳೆ ಬೆಳೆಯಿಲ್ಲದೆ ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸದೆ ರೈತರ ಪರ ಆಲೋಚನೆ ಮಾಡಿದ ಸಂಘದ ಹಿರಿಯರು ಸರಳವಾಗಿ ಆಚರಿಸಲು ತೀರ್ಮಾನಿಸಿರುತ್ತಾರೆ ಎಂದು ಪ.ಪಂ.ಸದಸ್ಯ ಹಾಜಿ ಚೌದ್ರಿ ಹೇಳಿದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಯೊಂದಿಗೆ ಯಾವುದೇ ಆಚರಣೆ, ಜಯಂತಿ, ಹಬ್ಬಗಳನ್ನು ಮಾಡಿದರೆ ಸೌಹಾರ್ದ ಮನೋಭಾವ ಮೂಡುತ್ತದೆ ಎಂದು ಕಾಂಗ್ರೆಸ್ ಮುಖಂಡ. ಮಹ್ಮದ್ ಹುಸೇನ್ ಹೇಳಿದರು.
ಸಿಪಿಐ ಶಶಿಕಾಂತ್ ಎಂ ಮಾತನಾಡಿದರು. ಮಹ್ಮದ್ ಮೌಲಸಾಬ್ ವರ್ಚಸ್, ಮಹಿಬೂಬಸಾಬ್ ದೊಡ್ಮನಿ, ಸತ್ತರಸಾಬ್ ಗುತ್ತೇದಾರ, ಅಜೀಮುದ್ದೀನ್, ಇಬ್ರಾಹಿಮ್ , ರಹೀಮ್ ಸಾಬ್, ರಫಿ ಜಂಗಿ, ಮಹ್ಮದ್ ಇಸ್ಮಾಯಿಲ್ ನಶಿಪುಡಿ, ವಾಹೀದ್ ಸೇರಿದಂತೆ ಇತರರು ಇದ್ದರು.