ಸರಳವಾಗಿ ಜಯಂತಿ ಆಚರಣೆ

ಕಾಳಗಿ. ಏ.6: ಪಟ್ಟಣದ ಕಾಳೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ರವರ 114 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಥಾಪಕರಾದ ಸಂಗಪ್ಪ ಅರಣಕಲ್ ಅವರು ಡಾ. ಬಾಬು ಜಗನಜೀವನರಾಂ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಅಂಬದಾಸ ಮದನೆ, ಶಿಕ್ಷಕರಾದ ಸಂತೋಷ ಕೊಂಡನಪಳ್ಳಿ, ಮಹೇಬೂಬ ಮುಸ್ತಾಪ, ಪ್ರಕಾಶ ಮಠಪತಿ, ಅಜೇಯ ಜಾಧವ, ಅಭಿಲಾಷ ಮಾಕಪನೊರ, ವಿಶ್ವನಾಥ ಕಂಬಾರ, ಅರ್ಚನಾ, ಭವ್ಯ ಸೂರವಾರ, ಸಿದ್ದಮ್ಮ ಹೂಗಾರ ಇದ್ದರು.