ಸರಳವಾಗಿ ಗುಡ್ ಫ್ರೈಡೇ ಆಚರಣೆ

ಸಿರವಾರ.ಏ.೦೩- ಯೇಸುವನ್ನು ಶಿಲುಬೆಗೇರಿಸಿದಾಗಲೂ ಆತನು ಅವರು ತಾವೇನೂ ಮಾಡುತ್ತಿರುವರೆಂಬುದನ್ನು ಅರಿಯರು ಅವರನ್ನು ಕ್ಷಮಿಸಿಬಿಡು ಎಂದು ಹೇಳಿ ಜಗತ್ತಿನ ಶಾಂತಿ ಸ್ಥಾಪನೆಯ ಅರಸು ಏಸು ಆಗಿದ್ದಾರೆ ಎಂದು ಸಿರವಾರ ಕೇಂದ್ರ ಮೆಥೋಡಿಸ್ಟ್ ಚರ್ಚ್‌ನ ಮೇಲ್ವೀಚಾರಕ ರೇ.ಎ.ದೇವದಾನ್ ಹೇಳಿದರು.
ಗುಡ್ ಪ್ರೈಡೇ ಅಂಗವಾಗಿ ಪಟ್ಟಣದ ಕೇಂದ್ರ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು, ನಂತರ ಎ.ದೇವದಾನ್ ಅವರು ದೈವ ಸಂದೇಶ ನಾವು ಸತ್ಯವೇಧದಲ್ಲಿನ ನಿಜವಾದ ಸತ್ಯತೆಯನ್ನು ಅರಿಯದೇ ಹೋದರೆ ನಿತ್ಯ ಜೀವ ಪಡೆಯಲು ಸಾಧ್ಯವಿಲ್ಲ, ನಾವು ನಿತ್ಯ ಮಾರ್ಗ ಹೊಂದಬೇಕಾದರೆ ದೇವರಿಗೆ ಇಷ್ಟವಾದ ಮಕ್ಕಳಾಗಿ ನಡೆದುಕೊಂಡು ಸಾಕ್ಷಿ ಕೊಡುವ ಮಕ್ಕಳಾಗಿ ದೇವರ ಮಹಿಮೆಯನ್ನು ಹೊಂದಿಕೊಳ್ಳಬೇಕು, ಯವೋಹ ದೇವರ ಚಿತ್ತದಂತೆ ಯೇಸು ಕ್ರಿಸ್ತರು ಭೂಲೋಕದಲ್ಲಿ ೩೩ ವರ್ಷ ಜೀವಿಸಿ ಪಾಪಗಳು, ಕಷ್ಟಗಳಿಂದ ಜನರನ್ನು ಬಿಡುಗಡೆ ಹೊಂದುವುದಕ್ಕಾಗಿ ತಾನು ಶಿಲುಬೆ ಮೇಲೆ ಮರಣ ಹೊಂದಿ ಮೂರನೇ ದಿನದಲ್ಲಿ ಮೊದಲೇ ಹೇಳಿದಂತೆ ಎದ್ದು ಬಂದನು ಆತನೇ ಯೇಸು ಕ್ರಿಸ್ತನಾಗಿದ್ದಾನೆ ಎಂದರು.
ಗುಡ್ ಫೈಡೇ ಅಂಗವಾಗಿ ಯೇಸುಸ್ವಾಮಿ ಶಿಲುಬೆ ಮೇಲೆ ಹಾಡಿ ೭ ಮಾತುಗಳನ್ನು ಒಬ್ಬೊಬ್ಬರಾಗಿ ಆ ಮಾತುಗಳ ಸಾರಾಂಶವನ್ನು ಭೋದಿಸಿದರು.
ವೇಧಿಕೆಯಲ್ಲಿ ಸಭಾ ಪಾಲಕರಾದ ರೇ.ಸಂಸೋನ್ ಡ್ಯಾನಿಯಲ್ ಇದ್ದರು. ಕ್ರೈಸ್ತ ಮುಖಂಡರು ಸೇರಿದಂತೆ ಇನ್ನಿತರರು ಇದ್ದರು.