ಸರಳವಾಗಿ ಕಾರ್ಮಿಕ ದಿನಾಚರಣೆ

ಕುಡುತಿನಿ, ಮೇ 1 ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಗುತ್ತಿಗೆ ಕಾರ್ಮಿಕ ಸಂಘ ಹಾಗೂ ಕುಡುತಿನಿ ಕಟ್ಟಡ ಕಾರ್ಮಿಕರ ಸಂಘ ಜಂಟಿಯಾಗಿ ಕೋವಿಡ್ 19 ಕಾರಣ ಅತ್ಯಂತ ಸರಳವಾಗಿ ಕಾರ್ಮಿಕ ದಿನಾಚರಣೆಯನ್ನು ಬೀ.ಟಿ ಪಿ ಎಸ್ ಗುತ್ತಿಗೆ ಕಾರ್ಮಿಕ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು
ವಿಶ್ವಕಾರ್ಮಿಕ ದಿನಾಚರಣೆಯ ನ್ನುದ್ದೇಶಿಸಿ ಎಂ.ತಿಪ್ಪೇಸ್ವಾಮಿ ಮಾತನಾಡಿದರು. ಕಾರ್ಮಿಕರ ಕಠಿಣ ಪರಿಶ್ರಮದಿಂದ ದೇಶ ಕಟ್ಟುವ
ಚಲ ಗಾರರಿಗೆ ಒಂದು ದಿನವನ್ನು ಮೀಸಲಿಡಲಾಗಿದೆ ದಿನವನ್ನು ಶ್ರಮಜೀವಿಗಳ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ
ಶ್ರಮಜೀವಿ ಕಾರ್ಮಿಕರು ಹಗಲು-ರಾತ್ರಿಯೆನ್ನದೆ ಕಠಿಣ ಪರಿಶ್ರಮ ಸಮರ್ಪಣ ಭಾವಕ್ಕೆ ಇರುವ ಸಾಕಷ್ಟು ಕಷ್ಟವನ್ನು ನುಂಗಿ ಖುಷಿ ಹಂಚುವ ಶ್ರಮಿಕರು ದೇಶ ಕಟ್ಟುವ ಕೆಲಸದಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು ಕಾರ್ಮಿಕರ ಶ್ರಮದಲ್ಲಿ ದೇಶದ ಭವಿಷ್ಯ ಅಡಗಿದೆ ಶ್ರಮ ಜೀವಿಗಳು ಇಲ್ಲದೆ ದೇಶವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ತಮ್ಮ ದುಡಿಮೆಯಿಂದ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುವ ಸಂಸ್ಥೆಗೆ ಬೆಳವಣಿಗೆಗೆ ಕಾರಣರಾಗಿರುತ್ತಾರೆ ಇಂತಹ ಶ್ರಮಜೀವಿಗಳನ್ನು ಗೌರವಿಸುವ ಇವರ ಶ್ರಮವನ್ನು ಗುರುತಿಸುವ ಇವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ ಡೇ ಆಚರಿಸಲಾಗುತ್ತದೆ ಎಂದು ತಿಳಿಸಿದರು 1886 ರಲ್ಲಿ ಮೊದಲ ಕಾರ್ಮಿಕ ದಿನಾಚರಣೆಯನ್ನು ಎಂಟು ಗಂಟೆ ಕೆಲಸ. ಅವಧಿ ಆಗ್ರಹ ದೊಂದಿಗೆ ಆರಂಭ ವಾದ ಚಳುವಳಿ ಯಶಸ್ಸು ಸಿಕ್ಕಿತು ಈ ಹೋರಾಟದ ಕಿಚ್ಚ ಲಿ ಹಲವಾರು ಕಾರ್ಮಿಕರು ರಕ್ತವ ಕ್ರಾಂತಿಯನ್ನು ಮಾಡಿದರು ಪರ್ಯಾಯವಾಗಿ ಕಾರ್ಮಿಕ ದಿನಾಚರಣೆಯನ್ನು ಉದಯಿಸಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿರುವ ಎಂ.ತಿಪ್ಪೇಸ್ವಾಮಿ . ಕಾರ್ಯದರ್ಶಿ ಮಲಿಯಪ್ಪ ಕುಡುತಿನಿ ಕಟ್ಟಡ ಕಾರ್ಮಿಕ ಸಂಘದ ಕಾರ್ಮಿಕ ಸಂಘದ ಅಧ್ಯಕ್ಷರಾಗಿರುವ ಅಜ್ಜಿ ಶ್ರೀನಿವಾಸ್. ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷರಾಗಿರುವ ಎಲ್ಲಪ್ಪ. ಹಾಗೂ ಮಹಿಳಾ ಮುಖಂಡರಾಗಿರುವ ರುದ್ರಮ್ಮ. ಮಲ್ಲಮ್ಮ ಹುಚ್ಚಮ್ಮ ಹಾಗೂ ರಿಯ ಮುಖಂಡರಾಗಿರುವ ತಿಮ್ಮಪ್ಪ ಮೊದಲಾದವರು ಭಾಗವಹಿಸಿದ್ದರು